Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೌರತ್ವ ತಿದ್ದುಪಡಿ ಕಾಯ್ದೆಗೆ ಒಕ್ಕೊರಲಿನಿಂದ ಹೀಗೆ ಮಾಡಿ ಅಂದೋರಾರು?

ಪೌರತ್ವ ತಿದ್ದುಪಡಿ ಕಾಯ್ದೆಗೆ ಒಕ್ಕೊರಲಿನಿಂದ ಹೀಗೆ ಮಾಡಿ ಅಂದೋರಾರು?
ಹುಬ್ಬಳ್ಳಿ , ಶನಿವಾರ, 14 ಡಿಸೆಂಬರ್ 2019 (16:30 IST)
ದೇಶದ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಕಾರ್ಯವಾಗಿದೆ. ಅದಕ್ಕೆ ಒಕ್ಕೊರಲಿನಿಂದ ಹೀಗೆ ಮಾಡಿ ಅಂತ ಕರೆ ನೀಡಲಾಗಿದೆ.

ಈ ಕಾಯ್ದೆಯನ್ನು ದೇಶದಾದ್ಯಂತ ವಿಸ್ತರಿಸಲು ಸಂಸತ್ತಿನಲ್ಲಿ ಬಿಲ್ ಪಾಸ್ ಮಾಡಿರುವುದನ್ನು ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ತೀವ್ರವಾಗಿ ವಿರೋಧಿಸುತ್ತದೆ ಅಂತ ಸಿಟಿಜನ್ ಫಾರ್ ಡೆಮಾಕ್ರಸಿಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದ್ದಾರೆ.
webdunia

ಈ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ಯು ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಇದನ್ನು ಬಿಜೆಪಿ ಹಾಗೂ ಸಂಘ ಪರಿಹಾರ ಪೌರತ್ವ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ ಎಂದು ದೂರಿದ್ರು.  

ಈ ಕಾಯ್ದೆಯು, ಜನರು ಮಾನವೀಯ ಮೌಲ್ಯ, ಸರ್ವ ಜನರು ಭಾತೃತ್ವದಲ್ಲಿ ಇರಬೇಕು ಎಂಬ ಅಶಯಗಳಿಗೆ ತಿಲಾಂಜಲಿ ಹಾಡುವ ಜೊತೆಗೆ ರಾಷ್ಟ್ರದಲ್ಲಿ ಆದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಸಕಿ ಹಾಕುವ ದುರುಳ ಪ್ರಯತ್ನ ಆಗಿದೆ ಅಂತ ಟೀಕೆ ಮಾಡಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಬಿ.ಶ್ರೀರಾಮುಲು ಹೆಸರಲ್ಲಿ ಅಧಿಕಾರಿಗಳಿಂದ ಹಫ್ತಾ ವಸೂಲಿ?