Webdunia - Bharat's app for daily news and videos

Install App

ನಗರಗಳಿರುವುದು ಸುಗಮ ಜೀವನಕ್ಕಾಗಿ, ವಾಹನಗಳ ಭರಾಟೆಗಲ್ಲ

Webdunia
ಶುಕ್ರವಾರ, 15 ಸೆಪ್ಟಂಬರ್ 2017 (20:45 IST)
ನಗರಗಳಿರುವುದು ಜನರ ಸುಗಮ ಜೀವನಕ್ಕಾಗಿಯೇ ಹೊರತು ವಾಹನಗಳ ಭರಾಟೆಗಲ್ಲ. ನಗರಗಳ ಸುಸ್ಥಿರತೆಗೆ ನೇಸರ್ಗಿಕ ಸಂಪನ್ಮೂಲಗಳ ಅಸಮರ್ಪಕ ಬಳಕೆ ನಿಲ್ಲಿಸಬೇಕು ಎಂದು ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ ನಗರದ ಸುಸ್ಥಿರತೆ ವಿಭಾಗದ ನಿರ್ದೇಶಕರಾಗಿರುವ  ಲೆ ಬ್ಯಾಂಬರ್ಗರ್‌  ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಗುರುವಾರ ಚೆನ್ನೈನ ಮೆರಿಕ ರಾಯಭಾರ ಕಚೇರಿ ಮತ್ತು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಏರ್ಪಡಿಸಿದ್ದ ನಗರ, ರಾಜಕಾರಣ ಮತ್ತು ಸುಸ್ಥಿರತೆ ವಿಷಯದ ಸಂವಾದದಲ್ಲಿ ಬಗ್ಗೆ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಮಾಜದ ಪ್ರಮುಖರನ್ನ ಉದ್ದೇಶಿಸಿ ಉಪನ್ಯಾಸ ನೀಡಿದರು.

ಸುಸ್ಥಿರ ನಗರ ಯೋಜಿಸುವಲ್ಲಿ ಸಂರಕ್ಷಣಾ ವಿಜ್ಞಾನ ಮತ್ತು ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜ್ಞಾನ ವಿನಿಮಯ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಎನ್‌ಜಿಒ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ’ಗ್ರೀನೊವೇಟ್‌’ ರಾಯಭಾರಿಗಳನ್ನ ಭೇಟಿಯಾದರು. ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಉದ್ಯಮಗಳ ಪಾತ್ರದ ಕುರಿತು ಪರಿಸರ ಸ್ನೇಹಿ ಉದ್ಯಮಗಳ ಸಿಇಒ ಮತ್ತು ಸಿಒಒಗಳೊಂದಿಗೆ ಮಾತುಕತೆ ನಡೆಸಿದರು. ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಸುಸ್ಥಿರ ನಗರಗಳ ಬಗ್ಗೆ ಚರ್ಚೆ ನಡೆಸಿದರು.

ಸದ್ಯ ಲೆ ಬ್ಯಾಂಬರ್ಗರ್‌, ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ ನಗರದ  ಸಸ್ಟೈನಬಲಿಟಿ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ತ್ಯಾಜ್ಯವನ್ನು ಮಿತಿಗೊಳಿಸುವುದು, ಮಾಲಿನ್ಯದ ತಡೆ, ಕಾರ್ಯಕ್ಷಮತೆ ಹೆಚ್ಚಳಕ್ಕೆ ಪ್ರೋತ್ಸಾಹ ಮತ್ತು ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸುಸ್ಥಿರ ನಗರದ ವಿಷಯವಾಗಿ ಬೋಸ್ಟನ್ ನಗರವನ್ನ ಪ್ರಸ್ತಾಪಿಸಿದ ವರು ನಾವಿಡುವ ಪ್ರತಿಯೊಂದು ಹೆಜ್ಜೆ ದೊಡ್ಡ ಪ್ರತ ಫಲ ಕೊಡುತ್ತದೆ. ಬೋಸ್ಟನ್ ನಗರದಲ್ಲಿರುವ ಗಲವಾದ ಪಾದಚಾರಿ ಮಾರ್ಗ, ಪ್ರತ್ಯೇಕ ಸೈಕಲ್ ಸಂಚಾರ ಮಾರ್ಗ, ನೀರಿನ ಪುನರ್ಬಳಕೆ ಪ್ರಸ್ತಾಪಿಸಿದರು. ಮಾಲಿನ್ಯದ ಅರಿವಿರುವ ಅಲ್ಲಿನ ಜನ ಸ್ವಪ್ರೇರಣೆಯಿಂದ ಇಂಧನ, ವಿದ್ಯುತ್ ಮಿತ ಬಳಕೆ, ಮಾಲಿನ್ಯ ನಿಯಂತ್ರಣದ ಮೂಲಕ ನಗರದ ಸುಸ್ಥಿರತೆಗೆ ಕಟಿಬದ್ಧರಾಗಿದ್ದಾರೆಂದು ತಿಳಿಸಿದರು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments