Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಟ್ ಫಂಡ್: ಮೂವರು ವಂಚಕರ ಬಂಧನ

ಚಿಟ್ ಫಂಡ್: ಮೂವರು ವಂಚಕರ ಬಂಧನ
ಬೆಂಗಳೂರು , ಸೋಮವಾರ, 12 ನವೆಂಬರ್ 2018 (16:01 IST)
ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಟ್ ಫಂಡ್ ಫೈನಾನ್ಸ್ ಮೂಲಕ ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಕೋಲಾರದ ಆರ್ ಕೆ ಎನ್ ರೈಸ್ ಮಿಲ್ ಮಾಲೀಕ ಷಣ್ಮುಗಂ, ಅವರ ಪುತ್ರ ದಿಲೀಪ್, ಫೈನಾನ್ಸ್ ಮ್ಯಾನೇಜರ್ ನಾಗರಾಜ ಬಂಧಿತರಾಗಿದ್ದಾರೆ.

ಬಂಗಾರಪೇಟೆಯಲ್ಲಿ ಆರ್ ಕೆ ಎನ್ ಚಿಟ್ಸ್ ಅಂಡ್ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಷಣ್ಮುಗಂ ಲೇವಾದೇವಿ ವ್ಯವಹಾರ ಆರಂಭಿಸಿದ್ದರು. ಬಡ್ಡಿಯ ಆಸೆಗೆ ನೂರಾರು ಜನರು ಹಣ ಹೂಡಿಕೆ ಮಾಡಿದ್ದರು.

ಅಂದಾಜು 6 ಸಾವಿರ ಕೋಟಿ ರೂ. ಠೇವಣಿ ಪಡೆದು ಯಾವುದೇ ಲೆಕ್ಕ ತೋರಿಸದೆ ಇತರರಿಗೆ ಸಾಲ, ಎಲ್ ಐ ಸಿ ಬಾಂಡ್, ಜಮೀನು ಖರೀದಿ, ಹಣ ಲೇವಾದೇವಿಯಲ್ಲಿ ಕಂಪನಿ ಹಣ ತೊಡಗಿಸಿತ್ತು. ಕಂಪನಿ ನೀಡಿದ ಚೆಕ್ ಗಳು ಬೌನ್ಸ್ ಆಗಿದ್ದರಿಂದ ಗ್ರಾಹಕರು ದೂರು ದಾಖಲು ಮಾಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಅನಂತಕುಮಾರ್ ರ ವಿಚಾರ ನನಗೆ ಶಕ್ತಿ ಕೊಟ್ಟಿವೆ ಎಂದ ಸದಾನಂದಗೌಡ