Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖ್ಯಮಂತ್ರಿಯಿಂದ ರಾಜ್ಯ ಬಜೆಟ್ ಮಂಡನೆ; ನಾನು ಕನಸು ಬಿತ್ತುವನಲ್ಲ, ಬಿತ್ತಿದ ಕನಸನ್ನು ನನಸು ಮಾಡಿ ಬೆಳೆಸುವವನು

ಮುಖ್ಯಮಂತ್ರಿಯಿಂದ ರಾಜ್ಯ ಬಜೆಟ್ ಮಂಡನೆ; ನಾನು ಕನಸು ಬಿತ್ತುವನಲ್ಲ, ಬಿತ್ತಿದ ಕನಸನ್ನು ನನಸು ಮಾಡಿ ಬೆಳೆಸುವವನು
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (12:03 IST)
ಬೆಂಗಳೂರು: ರಾಜ್ಯದ 2018-19ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ  5ವರ್ಷಗಳ ಕಾಲ ಆಡಳಿತ ಪೂರ್ಣಗೊಳಿಸಲು ಸಹಕರಿಸಿದ ರಾಜ್ಯದ ಜನತೆ, ಪ್ರತಿಪಕ್ಷಗಳು, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರನ್ನು ಸ್ಟಾರ್ಟ್ ಅಪ್ ನಗರವನ್ನಾಗಿ ರೂಪಿಸಿದ್ದೇವೆ. ನಾನು ಕೇವಲ ಕನಸು ಬಿತ್ತುವವನಲ್ಲ, ಬಿತ್ತಿದ ಕನಸನ್ನು ನನಸು ಮಾಡಿ ಬೆಳೆಸುವವನು ಎಂದಿದ್ದಾರೆ.


 
ಹೂಡಿಕೆಗೆ ಹೆಚ್ಚು ಆಕರ್ಷಣೀಯ ರಾಜ್ಯವನ್ನಾಗಿ ಮಾಡಿದ್ದೇವೆ. ರೈತರ ಕಷ್ಟ ತಗ್ಗಿಸುವ ಕೆಲಸ ಮಾಡಿದ್ದೇವೆ. ಕೃಷಿ, ಹೈನುಗಾರಿಕೆಯಲ್ಲಿ ನಾವು ಮುಂದಿದ್ದೇವೆ. ಕೃಷಿಗೆ 5080 ಕೋಟಿ ರೂಪಾಯಿ ಅನುದಾನ, ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ, ಜಲಸಂಪನ್ಮೂಲ ಇಲಾಖೆಗೆ 15,929 ಕೋಟಿ ಅನುದಾನ,ಸಣ್ಣ ನೀರಾವರಿಗೆ 2090 ಕೋಟಿ ರೂ. ಅನುದಾನ. ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ. ಅನುದಾನ,ಮೀನುಗಾರಿಕೆಗೆ 337 ಕೋಟಿ ಅನುದಾನ. ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ, 30 ಲಕ್ಷ ಫಲಾನುಭವಿಗಳಿಗೆ ಅನಿಲಾಭಾಗ್ಯ ನೀಡಿದ್ದೇವೆ ಎಂದು ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಲೈವ್ ಬಜೆಟ್ 2018-19: ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ