ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಂಬತ್ತು ಗುಂಡುಗಳು ತಗುಲಿ ಕೋಮಾದಲ್ಲಿದ್ದ ಸೇನಾಧಿಕಾರಿ ಚೇತನ್ ಕುಮಾರ್ ಚೀತಾ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಕಳೆದ ಫೆ.14 ರಂದು ಸಿಆರ್‌ಪಿಎಫ್ ಕಮಾಂಡಿಗ್ ಆಫೀಸರ್ ಚೇತನ್ ಕುಮಾರ್ ಅವರಿಗೆ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಒಂಬತ್ತು ಗುಂಡುಗಳು ತಗುಲಿ ಗಾಯಗೊಂಡಿದ್ದರು. ಅವರು ಕೋಮಾಗೆ ಜಾರಿದ್ದರಿಂದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಮಾರು ಒಂದುವರೆ ತಿಂಗಳುಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ವೀರ ಯೋಧ ಚೇತನ್ ಕುಮಾರ್ ಚೀತಾ ಕೊನೆಗೂ ಸಾವನ್ನು ಗೆದ್ದು ಬಂದಿದ್ದಾರೆ.
ಚೇತನ್‌ಕುಮಾರ್ ಅವರಿಗೆ ಪ್ರಜ್ಞೆ ಬಂದಿದ್ದು, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.