ಚೈತ್ರ ಕುಂದಾಪುರ ಮತ್ತು ಗ್ಯಾಂಗ್ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಐದನೇ ಆರೋಪಿಯಾಗಿರುವ ಚನ್ನಾ ನಾಯಕ್ನನ್ನ ಬಂಧಿಸಲಾಗಿದೆ. ಚನ್ನ ನಾಯಕ್ ತನ್ನ ಬಂಧನಕ್ಕೂ ಮುನ್ನ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ಸಿಸಿಬಿ ಪೊಲೀಸರ ಕಾಂಟ್ಯಾಕ್ಟ್ ನಂಬರ್ ನೀಡುವಂತೆ ಕೇಳಿದ್ದನಂತೆ. ಈ ವೇಳೆ ಕಂಟ್ರೋಲ್ ರೂಂ ಸಿಬ್ಬಂದಿ ನಿನ್ನೆ ಸಿಸಿಬಿ ಪೊಲೀಸ್ ಸ್ಟೇಷನ್ ಹತ್ತಿರ ಹೋಗುವಂತೆ ಹೇಳಿದ್ದಾರೆ. ನಂಬರ್ ಸಿಗದ ಕಾರಣ ಚನ್ನ ನಾಯಕ್ ರಾತ್ರಿಯಿಡಿ ಗೂಗಲ್ನಲ್ಲಿ ಸಿಸಿಬಿ ಅಧಿಕಾರಿಗಳ ಸಂಪರ್ಕಿಸಲು ನಂಬರ್ ಹುಡುಕಿದ್ದಾನೆಂಬ ಮಾಹಿತಿ ಹೊರಬಿದ್ದಿದೆ.