ರಾಜ್ಯ ಸರಕಾರದ ಈ ಇಲಾಖೆಯ ಅಧಿಕಾರಿಗಳ ಮೊಬೈಲ್ ಕಾಲರ್ ಟ್ಯೂನ್ ನನ್ನು ಸಚಿವರೊಬ್ಬರು ಬದಲಾವಣೆ ಮಾಡಿದ್ದಾರೆ.
ರೈತರನ್ನು ಎಲ್ಲರೂ ನೆನೆಯುವ ಉದ್ದೇಶದಿಂದ ಕೃಷಿ ಇಲಾಖೆಯ ಎಲ್ಲ ಮೊಬೈಲ್ ಫೋನ್ ಗಳಿಗೆ ಒಳಬರುವ ಕಾಲರ್ ಟ್ಯೂನ್ ಅನ್ನು "ನಮಸ್ಕಾರ ಅನ್ನದಾತನಿಗೊಂದು ನಮನ, ಜೈ ಕಿಸಾನ್" ಎಂಬ ಹಾಡನ್ನು ಹಾಕಿ ಕುವೆಂಪು ಅವರು ಬರೆದ ನೇಗಿಲಯೋಗಿ ಹಾಡನ್ನು ಅದಕ್ಕೆ ಸೇರಿಸಲು ಸುತ್ತೋಲೆ ಕಳುಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.
ಜಗತ್ತಿನಲ್ಲಿ ಎಲ್ಲ ಉದ್ಯಮಗಳು ಮುಚ್ಚಿಕೊಂಡು ಹೋದ ಸಂದರ್ಭದಲ್ಲಿ ಕೃಷಿ ಮಾತ್ರ ಉಳಿದುಕೊಂಡಿದೆ. ಕೃಷಿಕ ಕೋವಿಡ್, ಲಾಕ್ ಡೌನ್ ಸಮಯದಲ್ಲೂ ತನ್ನ ಯಾವುದೇ ಕೆಲಸಗಳನ್ನು ಬಿಡದೆ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವುದರಿಂದ ಜಗತ್ತಿಗೆ ಅನ್ನ ಸಿಗುತ್ತಿದೆ ಎಂದರು.
ಚಂದ್ರಗ್ರಹಣ, ಸೂರ್ಯ ಗ್ರಹಣ ಇವು ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆಗಳು. ಅದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.