ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಜೈಲಿನಲ್ಲಿ ವಿಐಪಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಕ್ರಮ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಲಂಚ ನೀಡಿದ್ದಾರೆ ಎಂದೂ ಸಹ ಆರೋಪ ಕೇಳಿಬಂದಿದೆ.
ಕಾರಾಗೃಹದ ಡಿಐಜಿ ರೂಪಾ ತನ್ನ ಮೇಲಧಿಕಾರಿ ಕಾರಾಗೃಹದ ಡಿಜಿಪಿ ಎಚ್`ಎಸ್ಎನ್ ರಾವ್ ಅವರಿಗೆ ನೀಡಿರುವ ವರದಿಯಲ್ಲಿ ವಿ.ಕೆ. ಶಶಿಕಲಾಗೆ ವಿಶೇಷ ಅಡುಗೆ ಮನೆ ಸೇರಿದಂತೆ ಇತರೆ ಸೌಲಭ್ಯಗಳನ್ನ ಕಾನೂನು ಬಾಹಿರವಾಗಿ ನೀಡಲಾಗುತ್ತಿದೆ ಎಂದು ಉಲ್ಲೇಖಿಸಿರುವುದಾಗಿ ಸಿಎನ್ಎನ್`-ನ್ಯೂಸ್ 18 ವರದಿ ಮಾಡಿದೆ.
ಈ ಅಕ್ರಮ ಸೌಲಭ್ಯಗಳನ್ನ ಪಡೆಯಲು ಶಶಿಕಲಾ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಆರೋಪಿಸಲಾಗಿದೆ. ಇದರ ಜೊತೆಗೆ ನಕಲಿ ಛಾಪಾ ಕಾಗದ ಹಗರಣದಲ್ಲಿ ಜೈಲು ಸೇರಿರುವ ಕರೀಂ ಲಾಲ ತೆಲಗಿಗೂ ವಿಐಪಿ ಸವಲತ್ತು ಸಿಗುತ್ತಿದ್ದು, ವಿಚಾರಣಾಧೀನ ಕೈದಿಗಳನ್ನ ಮಸಾಜ್ ಮಾಡಲು ನೇಮಿಸಲಾಗಿದೆ ಎಂದು ವರದಿಯಾಗಿದ
ನ್ಯೂಸ್-18 ವರದಿ ಮಾಡಿರುವಂತೆ ರೂಪಾ ವರದಿಯಲ್ಲಿ ಉಲ್ಲೇಕಿಸಿರುವ ಕೆಲ ಂಶಗಳು ಇಲ್ಲಿವೆ
ಜೈಲಿನ ನಿಯಮ ಉಲ್ಲಂಘಿಸಿ ಶಶಿಕಲಾಗೆ ವಿಶೇಷ ಅಡುಗೆ ಮನೆ ಸೌಲಭ್ಯ.
ಈ ಸೌಲಭ್ಯ ಪಡೆಯಲು 2 ಕೋಟಿ ರೂ. ಲಂಚ ನೀಡಿರುವ ವದಂತಿ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ