Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರ್.ಎಲ್.ಜಾಲಪ್ಪ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲು

ಆರ್.ಎಲ್.ಜಾಲಪ್ಪ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲು
ಬೆಂಗಳೂರು , ಗುರುವಾರ, 19 ಅಕ್ಟೋಬರ್ 2017 (11:32 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್‍ಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಆರ್.ಎಲ್.ಜಾಲಪ್ಪ ಮೇಲೆ ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ. ದಲಿತರು, ಹಿಂದುಳಿದವರ ಹೆಸರಲ್ಲಿ ಜಾಲಪ್ಪ ಭಾರೀ ಭ್ರಷ್ಟಾಚಾರ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಮೆಡಿಕಲ್ ಕಾಲೇಜು ಸೀಟು ಹಗರಣದಲ್ಲಿ ದೇವರಾಜ ಅರಸ್ ಶಿಕ್ಷಣ ಸಂಸ್ಥೆಗಳ ಮಾಲೀಕ ಆಗಿರುವ ಆರ್.ಎಲ್.ಜಾಲಪ್ಪ ಸೇರಿದಂತೆ ಆಂಧ್ರದ ನಾಲ್ವರು ಪ್ರಭಾವಿಗಳ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ. ದೇವರಾಜು ಅರಸು ಮೆಡಿಕಲ್ ಕಾಲೇಜು, ಎಜುಕೇಷನ್ ಅಂಡ್ ರೀಸರ್ಚ್ ಸಂಸ್ಥೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಅನಧಿಕೃತವಾಗಿ ಮೆಡಿಕಲ್ ಕೋರ್ಸ್ ತೆರೆದ ಗಂಭೀರ ಆರೋಪ ಕೇಳಿಬಂದಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಮೆಡಿಕಲ್ ಕೋರ್ಸ್ ತೆಗೆದು ಹಿಂದುಳಿದವರ ಹೆಸರಲ್ಲಿ ಹೆಚ್ಚು ಸೀಟು ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಮೆಡಿಕಲ್ ವಿದ್ಯಾರ್ಥಿಗಳ ಹೆಸರಲ್ಲಿ ಜಾಲಪ್ಪ ಶಿಕ್ಷಣ ಸಂಸ್ಥೆ ಲೂಟಿ ಮಾಡಿದ್ದು, ಈ ಬಗ್ಗೆ ಆಂಧ್ರ ಎಸಿಬಿಯಿಂದ ದಾಖಲಾದ ದೂರಿನ ಮೇಲೆ ಸಿಬಿಐನಿಂದಲೂ ಎಫ್‍ಐಆರ್ ದಾಖಲಾಗಿದೆ. ಕಾನೂನು ಬಾಹಿರವಾಗಿ ಎಂಬಿಬಿಎಸ್, ಎಂಎಸ್, ಎಂಡಿ ಕೋರ್ಸ್‍ಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜಾಲಪ್ಪ ಶಿಕ್ಷಣ ಸಂಸ್ಥೆಯಿಂದ ಭಾರೀ ಲಂಚ ಪಡೆದ ಆರೋಪದಲ್ಲಿ ಆರ್‍.ಎಲ್.ಜಾಲಪ್ಪ ಜತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ತಪ್ಪೊಪ್ಪಿಕೊಂಡರೆ ಅವರಿಗೆ ಸೆಲ್ಯೂಟ್ ಮಾಡ್ತಾರಂತೆ ಕಮಲ್ ಹಾಸನ್