Webdunia - Bharat's app for daily news and videos

Install App

ಉದ್ದಿಮೆಗಳಿಂದ್ಲೇ ಬೆಂಗಳೂರಿನಲ್ಲಿ ಕಾವೇರಿ ನೀರು ಕಳ್ಳತನ..!

Webdunia
ಬುಧವಾರ, 3 ಜನವರಿ 2024 (16:40 IST)
ಹೊಸ ವರ್ಷದ ಆರಂಭದಲ್ಲೇ   ಕಾವೇರಿ ನೀರು ಕದಿಯುವ ಉದ್ದಿಮೆಗಳಿಗೆ ಬಿಗ್ ಶಾಕ್ ಎದುರಾಗಿದೆ.ಬೆಂಗಳೂರಿನಲ್ಲಿ ಉದ್ದಿಮೆಗಳ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಮೀತಿಮೀರಿದೆ.ಅನಧಿಕೃತ ನೀರಿನ ಸಂಪರ್ಕ ಪಡೆದವರ ವಿರುದ್ದ ಬೆಂಗಳೂರು ಜಲಮಂಡಳಿ ಸಮರಸಾರಿದೆ.ಕಾವೇರಿ ನೀರಿಗೆ ಕೈಗಾರಿಕೆಗಳು ಹಾಗೂ ವಾಣಿಜ್ಯ ಉದ್ದಿಮೆಗಳು ಕನ್ನಹಾಕಿದೆ.ಈ ಬಾರಿ ಕೈಗಾರಿಕೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳ ಮಾಲೀಕರನ್ನು ಜಲಮಂಡಳಿ ಟಾರ್ಗೆಟ್ ಮಾಡಿದೆ.
 
ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ನೀರಿನ ಕಳ್ಳರ ವಿರುದ್ದ ಸಾಲು ಸಾಲು ದೂರು ಬಂದಿದೆ ಹೀಗಾಗಿ ಕಾವೇರಿ ಕಳ್ಳರ ವಿರುದ್ದ ಸಮರಕ್ಕೆ ಜಲಮಂಡಳಿ ಅಧಿಕಾರಿಗಳು ನಿಂತಿದ್ದಾರೆ.ಮಹಾದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕದಲ್ಲಿ ಅತಿ ಹೆಚ್ಚು ಕಾವೇರಿ ನೀರು ಕಳ್ಳತನವಾಗ್ತಿದೆ.ಇದರಿಂದ ಬೆಂಗಳೂರು ಜಲಮಂಡಳಿಗೆ ಕೋಟಿ ಕೋಟಿ ನಷ್ಟವಾಗಿದೆ.ಕಾವೇರಿ ನೀರು ಕುಡಿದು  ದೊಡ್ಡ ದೊಡ್ಡ ಉದ್ದಿಮೆಗಳು ಬಿಲ್ ಕಟ್ಟಿಲ್ಲ.

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಮಾಲೀಕರಿಂದ ಲಕ್ಷ ಲಕ್ಷ  ಲೀಟರ್ ಕಾವೇರಿ ನೀರು ಕಳ್ಳತನವಾಗಿದೆ.ನಿತ್ಯ ಬೆಂಗಳೂರಿಗೆ 1450 ಎಂಎಲ್ಡಿ ನೀರು ಕಾವೇರಿ ನದಿಯಿಂದ ಪೂರೈಕೆಯಾಗಿದೆ ಆದ್ರೆ ಅನಧಿಕೃತ ಸಂಪರ್ಕಗಳಲ್ಲಿ ಕಾವೇರಿ ನೀರು ಸೋರಿಕೆಯಾಗ್ತಿದೆ .ಅನಧಿಕೃತ ಸಂಪರ್ಕ ಪಡೆದುಕೊಂಡಿದ್ರೆ ಶಿಕ್ಷಾರ್ಹ ಅಪರಾಧವಾಗಿದೆ ಆದ್ರು ಅಕ್ರಮವಾಗಿ ಸಂಪರ್ಕ ಪಡೆದು ಕಾವೇರಿ ನೀರು ಬೆಂಗಳೂರು ಉದ್ದಿಮೆಗಳು  ಕುಡಿಯುತ್ತಿದೆ.ಜನವರಿಯಿಂದ್ಲೇ ಅಕ್ರಮ ಕೈಗಾರಿಕಾ ಹಾಗೂ ವಾಣಿಜ್ಯ ಚಟುವಟಿಕೆ  ಸಂಪರ್ಕಗಳ ಪತ್ತೆಗೆ ಜಲಮಂಡಳಿ ಮುಂದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments