ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಮಂಡ್ಯದ ರೈತರ ಸಂಕಷ್ಟವನ್ನು ಕಂಡು ತಮಿಳುನಾಡಿನ ರಾಜಕಾರಣಿ ಸುಬ್ರಮಣ್ಯ ಸ್ವಾಮಿ ಕರ್ನಾಟಕದ ಪರ ಬ್ಯಾಟಿಂಗ್ ಆಡಿದ್ದಾರೆ.
ಕಾವೇರಿ ಕ್ಯಾತೆ ತೆಗೆಯುವ ಜಯಲಲಿತಾಗೆ ತಮಿಳುನಾಡು ರಾಜಕಾರಣಿ ಸುಬ್ರಮಣ್ಯ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸದಾ ಕಾವೇರಿ ಕ್ಯಾತೆ ತೆಗೆಯದಂತೆ ಜಯಾಗೆ ಅವರು ಬುದ್ಧಿವಾದ ಹೇಳಿದ್ದಾರೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿ ನಂತರ ಬೆಳೆ ಬೆಳೆಯಿರಿ ಎಂದು ಅವರು ಹೇಳಿದ್ದಾರೆ.
ಸಮುದ್ರದ ಉಪ್ಪುನೀರನ್ನು ಸಿಹಿನೀರಾಗಿ ಪರಿವರ್ತಿಸುವುದಕ್ಕೆ ಪ್ರಯತ್ನಿಸಿ ಎಂದು ಅವರು ಬುದ್ಧಿವಾದ ಹೇಳಿದರು. ತಮಿಳುನಾಡಿನ ರಾಜಕಾರಣಿಗೆ ಇರುವ ಕಾಳಜಿ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಇಲ್ಲವೆಂಬ ಕೂಗು ಈಗ ಕೇಳಿಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ