ಬೆಂಗಳೂರು : ಬೆಂಗಳೂರಿನ ನಿವಾಸಿಗಳಿಗೆ ಒಂದು ವಿಶೇಷ ಸೂಚನೆ. ಬೆಂಗಳೂರಿನಲ್ಲಿ ಜುಲೈ 21 ಹಾಗೂ 22 ರಂದು ಕಾವೇರಿ ನೀರು ಪೂರೈಕೆಯಾಗುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.
ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯ ಪಂಪಿಂಗ್ ಕೇಂದ್ರಗಳಲ್ಲಿ ನೀರಿನ ಒತ್ತಡ ಕಡಿಮೆ ಮಾಡುವ ಕಾಮಗಾರಿ ಹಾಗೂ ವಿದ್ಯುತ್ ಗೆ ಸಂಬಂಧಿಸಿದ ಕೆಲಸಗಳು ನಡೆಯಲಿರುವ ಕಾರಣ ಎರಡು ದಿನ ಪಂಪಿಂಗ್ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಇಡೀ ನಗರಕ್ಕೆ ನೀರು ಪೂರೈಕೆ ಬಂದ್ ಆಗಲಿದೆ. ಆದಕಾರಣ ನಾಗರೀಕರು ಕಾವೇರಿ ನೀರನ್ನು ಈ ಮೊದಲೇ ಸಂಗ್ರಹಿಸಿಟ್ಟುಕೊಳ್ಳುವುದು ಸೂಕ್ತವೆನ್ನಲಾಗಿದೆ.