ಮಹಿಳೆಯೋರ್ವಳ ಕೈಯಿಂದ ಸಿಗರೇಟ್ ಹಚ್ಚಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಶೇಠ್ ಸ್ಪಷ್ಟನೆ ನೀಡಿದ್ದಾರೆ.
ನಾನು ಕಾಲೇಜ್ ದಿನಗಳಲ್ಲಿ ಸಿಗರೇಟ್ ಸೇವನೆ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ ಹೋದಾಗ ನನ್ನ ಪರಿಚಯದವರ ಮನೆಯಲ್ಲಿ ಚಹಾ ಸೇವನೆ ಮಾಡಿದ ಬಳಿಕ ಸಿಗರೇಟ್ ಸೇದಲು ಮುಂದಾದೆ. ಆಗ ನನ್ನ ಬಳಿ ಬೆಂಕಿ ಪೊಟ್ಟಣ ಇರಲಿಲ್ಲ. ಹೀಗಾಗಿ ಅವರನ್ನು ಬೆಂಕಿ ಪೊಟ್ಟಣ ಕೇಳಿದೆ ಕೂಡಲೇ ಆ ಮಹಿಳೆ ಲೈಟರ್ ಹಿಡಿದು ಸಿಗರೇಟ್ ಹೊತ್ತಿಸಿದಳು. ನಾನು ಸಿಗರೇಟ್ ಹೊತ್ತಿಸುವಂತೆ ಆ ಮಹಿಳೆಗೆ ಹೇಳಿರಲಿಲ್ಲ. ಈ ಘಟನೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷೇಮೆಯಾಚಿಸುತ್ತೇನೆ ಎಂದರು.
ಶಾಸಕ ಸೇಠ್ ಕೆಲ ದಿನಗಳ ಹಿಂದೆ ಮಹಿಳೆಯೋರ್ವಳ ಮನೆಗೆ ಹೋದಾಗ ಮಹಿಳೆ ಕೈಯಿಂದ ಸಿಗರೇಟ್ ಹೊತ್ತಿಸಿಕೊಂಡಿದ್ದಾರೆ ಎನ್ನಲಾಗಿದೆ. ಯಾರೋ ಇದನ್ನು ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪರಿ ಬಿಟ್ಟಿದ್ದರು. ಶಾಸಕರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕರು ಈಗ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ