Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಬೀಳುತ್ತೆ ಕೇಸ್

ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಬೀಳುತ್ತೆ ಕೇಸ್
ಗದಗ , ಮಂಗಳವಾರ, 23 ಜೂನ್ 2020 (15:36 IST)
ನೀವು ನಿಮ್ಮ ಮೊಬೈಲ್ ನ್ನು ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಲೇಬಾರದು. ಒಂದು ವೇಳೆ ಮಾಡಿದರೆ ನಿಮ್ಮ ವಿರುದ್ಧ ಎಫ್ ಐ ಆರ್ ದಾಖಲು ಮಾಡುವುದು ಪಕ್ಕಾ.

ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಪ್ರದೇಶದಿಂದ ಬೇರೆ ಕಡೆಗೆ ಚಲನ ವಲನ ಮಾಡುವುದಾಗಲಿ  ಅಥವಾ ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಬಾರದು.

ಒಂದು ವೇಳೆ ಉದ್ದೇಶಪೂರ್ವಕವಾಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಮೊಬೈಲ್ ಬಂದ್ ಮಾಡಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಐ.ಪಿ.ಸಿ. ಸೆಕ್ಷನ್ 188 ರನ್ವಯ ಎಫ್ಐಆರ್ ದಾಖಲಿಸಲಾಗುವುದು.

ಹೀಗಂತ ಗದಗ  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಸಾಂಕ್ರಾಮಿಕ ಪಿಡುಗಾದ ಕೋವಿಡ್-19 ಸೋಂಕು ತಡೆಗಟ್ಟಲು ಸರಕಾರ ಕೋವಿಡ್-19 ಕ್ವಾರಂಟೆನ್ ಅಲರ್ಟ ಸಿಸ್ಟಮ್  ಪ್ರಾರಂಭಿಸಿದೆ. ಈ ವ್ಯವಸ್ಥೆಯಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿರುತ್ತದೆ.  ವ್ಯಕ್ತಿಗಳ ಮೊಬೈಲ್ ನಂಬರ್ ನೆಟ್ ವರ್ಕ್ ಆಧಾರದ ಮೇಲೆ  ಕ್ವಾರಂಟೈನ್‍ನಿಂದ ಹೊರಗೆ ಬರದಂತೆ ನಿಗಾ ವಹಿಸುವ ಸಲುವಾಗಿ ಅವರ ಚಲನ-ವಲನಗಳನ್ನು ಗಮನಿಸಲಾಗುತ್ತದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಕಂಪನಿಗಳ ಒಪ್ಪಂದಕ್ಕೆ ತಡೆ ನೀಡಿದ ಮಹಾರಾಷ್ಟ್ರ ಸರ್ಕಾರ