Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಗಣ್ಣ ಕರಡಿ, ಪುತ್ರ ಅಮರೇಶ್ ಕರಡಿ ವಿರುದ್ಧ ದೂರು ದಾಖಲು

ಸಂಗಣ್ಣ ಕರಡಿ, ಪುತ್ರ ಅಮರೇಶ್ ಕರಡಿ ವಿರುದ್ಧ ದೂರು ದಾಖಲು
ಕೊಪ್ಪಳ , ಮಂಗಳವಾರ, 29 ಮೇ 2018 (18:36 IST)
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ 38 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊದಲ ಆರೋಪಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಎರಡನೇ ಆರೋಪಿ ಅಮರೇಶ ಕರಡಿ ಮತ್ತು ಮೂರನೇ ಆರೋಪಿ ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ವಿರುದ್ದ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 
ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದದಿಂದ ನಿಂದನೆ, ಅಕ್ರಮಕೂಟ ರಚನೆ ಹಿನ್ನಲೆಯಲ್ಲಿ ಪ್ರಕರಣ ದಾಖಲು.ಕೊಪ್ಪಳ ಬಂದ್ ವೇಳೆ ಠಾಣೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದ ಸಂಸದ ಸಂಗಣ್ಣ ಕರಡಿ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಒಟ್ಟು 38 ಜನರ ವಿರುದ್ಧ ದೂರು ದಾಖಲಾಗಿದೆ.
 
ಠಾಣೆಗೆ ನುಗ್ಗಿ ಪಿಐ ರವಿ ಉಕ್ಕುಂದ್ ಹಾಗೂ ಡಿವೈಎಸ್ ಪಿ ಎಂ.ಎಸ್.ಸಂದಿಗವಾಡ ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಡಿವೈವೆಸ್ಪಿಗೆ ಎಳೆದಾಡಿ ಹಲ್ಲೆ ಮಾಡಲು  ಯತ್ನಿಸಿದ್ದರು. ಸಂಸದ ಕರಡಿ ಸಂಗಣ್ಣ , ಪುತ್ರ ಅಮರೇಶ ಕರಡಿ ಸೇರಿದಂತೆ 38 ಜನರ ಮೇಲೆ 143,147,341,353,504 ಸೆಕ್ಷನ್ ಅಡಿ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣಾ ತೀರದ ರೈತರ ಕಣ್ಮಣಿ ಶಾಸಕ ಸಿದ್ದು ನ್ಯಾಮಗೌಡ ಈಗ ನೆನಪು ಮಾತ್ರ