ಬೆಂಗಳೂರು: ಪರಿಸರ ಮಲಿನವಾಗುತ್ತಿರುವ ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆ ಮತ್ತು ಬಳಕೆ ಅವಶ್ಯಕವಾಗಿದೆ ಎಂದು ಆರ್ಟ್ ಆಫ್ ಲೀವಿಂಗ್ ಸಂಸ್ಥಾನದ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ
ಮೂರು ದಿನಗಳ ಪರಿಸರ ಸ್ನೇಹಿ ಗ್ರೀನ್ ವೆಹಿಕಲ್ (ಹಸಿರು ವಾಹನ) ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಾಯುಮಾಲಿನ್ಯ ಮಾಡುವಂತಹ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ನಿಲ್ಲಿಸಿ ಪರಿಸರ ಶಕ್ತಿಗಳನ್ನು ಬಳಸಲು ಇಡೀ ಪ್ರಪಂಚ ಪಣ ತೊಟ್ಟಿದೆ. ಇದು ಉತ್ತಮ ಬೆಳವಣಿಗೆ,ಈ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಪರಿಸರ ಶಕ್ತಿಗಳಾದ ಸೋಲಾರ್, ವಿಂಡ್ ಹಾಗೂ ಎಲೆಕ್ಟ್ರಿಕ್ ಶಕ್ತಿಗಳನ್ನು ಬಳಸುವುದು ಅಗತ್ಯವಾಗಿದೆ. ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸಹ ಉತ್ತರ ಪ್ರದೇಶದ ರಿಮೋಟ್ ಗ್ರಾಮಗಳಲ್ಲಿ ಸೋಲಾರ್ ಅಳವಡಿಸುವ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿದೆ.ಅಂತಹ ಕಾರ್ಯಗಳಾಗಬೇಕಿದೆ ಎಂದರು.