ಶಿವಮೊಗ್ಗ : ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದಾಗಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮರಿಯಮ್ಮನಹಳ್ಳಿ ಬಳಿ ಷ ಕಾರು ಅಪಘಾತಕ್ಕೆ ಇಬ್ಬರು ಯುವಕರು ಮೃತಪಟ್ಟಿದ್ದು, ಈ ಅಪಘಾತದ ಹಿಂದೆ ಸಚಿವ ಆರ್. ಅಶೋಕ್ ಮಗನ ಕೈವಾಡವಿದೆ ಎನ್ನಲಾಗಿದೆ. ಆದಕಾರಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯ ಬಗ್ಗೆ ಮೃತ ಯುವಕನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿಐಪಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾದಾಗ ಪೊಲೀಸರು ಇನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಯಾರೂ ಯಾರ ಬದುಕಿನ ಜೊತೆಯೂ ಚೆಲ್ಲಾಟವಾಡಬಾರದು. ಈ ವಿಚಾರದಲ್ಲಿ ಯಾರ ತಪ್ಪಿದೆಯೋ ಅವರಿಗೆ ಸೂಕ್ತ ಶಿಕ್ಷೆಯಾಗಲಿದೆ. ಈ ವಿಚಾರದಲ್ಲಿ ತಾರತ್ಮ್ಯವಿಲ್ಲ . ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಭರವಸೆ ನೀಡಿದ್ದಾರೆ.