Webdunia - Bharat's app for daily news and videos

Install App

ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು

Webdunia
ಶುಕ್ರವಾರ, 17 ಡಿಸೆಂಬರ್ 2021 (19:47 IST)
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ ಇದನ್ನು ತಡೆಗಟ್ಟಲು ದೆಹಲಿ ಸರ್ಕಾರ ಮುಂದಾಗಿದೆ. ದೆಹಲಿಯಲ್ಲಿ ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ನಿರ್ದೇಶನದ ಪ್ರಕಾರ, ದೆಹಲಿ ಸರ್ಕಾರ ಜನವರಿ 1, 2022 ರಂದು 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ತಯಾರಿ ನಡೆಸಿದೆ. ಆದರೆ ಈ ವಾಹನಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಈ ವಾಹನಗಳನ್ನು ಬೇರೆ ಕಡೆಗಳಲ್ಲಿ ನೋಂದಾಯಿಸಲು ಬಳಸಲಾಗುವುದಿಲ್ಲ.
ಎನ್ ಜಿಟಿ ಪ್ರಕಾರ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿ ಮತ್ತು ಚಾಲನೆಯ ಮೇಲಿನ ನಿರ್ಬಂಧಗಳಿಗೆ ನಿರ್ದೇಶನ ನೀಡಲಾಗಿದೆ. ಜುಲೈ 2016 ರಲ್ಲಿ ಎನ್‌ಜಿಟಿ ನೀಡಿದ ಆದೇಶದಲ್ಲಿ, 10 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಡೀಸೆಲ್ ವಾಹನಗಳ ನೋಂದಣಿ ಆದೇಶವನ್ನು ತಪ್ಪದೆ ಜಾರಿಗೊಳಿಸಬೇಕು ಎಂದು ಮತ್ತೊಮ್ಮೆ ತಾಕೀತು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments