ಮಂಡ್ಯದ ಸಾತನೂರು ಗ್ರಾಮದಲ್ಲಿ BJP ಕಾರ್ಯಕರ್ತರ ಸಭೆ ವೇಳೆ ಮಾತನಾಡಿದ್ದ ಸಚಿವ ಡಾ. ಅಶ್ವತ್ಥ್ ನಾರಾಯಣ, ಟಿಪ್ಪು ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಕಾರ್ಯಕ್ರತರಿಗೆ ಹೇಳಿದ್ರು. ಈ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದೆ. ಅಶ್ವತ್ಥ್ ನಾರಾಯಣರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಸೇರಿದಂತೆ JDSನಿಂದಲೂ ಆಕ್ಷೇಪ ವ್ಯಕ್ತವಾಗ್ತಿದೆ. ಈ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ JDS ರಾಜ್ಯಾಧ್ಯಕ್ಷ C.M ಇಬ್ರಾಹಿಂ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಸಭೆಯಲ್ಲಿ ಟಿಪ್ಪು ಬಗ್ಗೆ ಗುಣಗಾನ ಮಾಡಿದ್ರು. ಅವರನ್ನು ಹಿಡ್ಕೊಂಡು ಹೊಡಿತಿರಾ ನೀವು? ಎಂದು BJPಯವರನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಬಗ್ಗೆ ಮಾತನಾಡೋಕೆ ಎಷ್ಟು ವಿಷಯಗಳಿದೆ. ರೈತರ ಸಮಸ್ಯೆ, ನೀರಾವರಿ ಯೋಜನೆ, ಶಿಕ್ಷಣ ಹೀಗೆ ಹಲವು ವಿಚಾರಗಳಿದೆ. ಆದರೆ BJP ಅದನ್ನು ಬಿಟ್ಟು ಇಂತಹ ಹೇಳಿಕೆ ಕೊಡ್ತಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಬೇರೆ ಪಾರ್ಟಿ ಇರಬಹುದು. ಆದ್ರೆ ಅವರು ವಿಪಕ್ಷ ನಾಯಕರು. ಡಿಜಿ ಅವ್ರು ಸುಮುಟೋ ಕೇಸ್ ದಾಖಲಿಸಿದ್ರೆ ಒಂದು ತೂಕ ಬರುತ್ತದೆ ಎಂದು ಹೇಳಿದ್ರು.