ನಗರದ ಎಷ್ಟೋ ಜನಕ್ಕೆ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಅಂದ್ರೆ ಏನು ಅನ್ನುವುದೇ ಗೊತ್ತಿಲ್ಲ. ಯಾವುದೋ ತಿನ್ನಲು ಯೋಗ್ಯವಾದ ಮಾಂಸ ಕೊಟ್ರೆ ಸಾಕು ಅಂತಾ ಕೊಂಡುಕೊಳ್ತಿದ್ರು. ಇನ್ನು ನಗರದ ಮಾಂಸದ ಅಂಗಡಿಗಳಲ್ಲಿ ಯಾರನ್ನ ಕೇಳಿದ್ರು ನಾವು ಹಲಾಲ್ ಕಟ್ ತೆಗೆದುಕೊಳ್ತೇವೆ ಅಂತಾಲೆ ಹೇಳ್ತಿದ್ರು. ಮೊದಲಿನಂತೆ ಹಲಾಲ್ ತೆಗೆದುಕೊಳ್ತಿದ್ದೇವೆ ಅದರಲ್ಲಿ ಏನು ವ್ಯತ್ಯಾಸ ಇಲ್ಲ ಅಂತಾರೆ. ಆದ್ರೆ ಎದ್ದಿರುವ ವಿವಾದದಿಂದ ಮಾಂಸದ ಅಂಗಡಿಗಳ ಮೇಲೆ ಯಾವುದೇ ಪರಿಣಾಮ ಆಗಿದಿಲ್ಲ. ಮಾಂಸದ ಅಂಗಡಿಗಳಲ್ಲಿ ಹಲಾಲ್ ಹೆಚ್ಚಿಗೆ ಸೇಲ್ ಆಗ್ತಿತ್ತು.
ಇನ್ನು ಈ ಬಾರಿ ಪಾಪಣ್ಣ ಮಟನ್ ಸ್ಟಾಲ್ ನಲ್ಲಿ 180 ಕುರಿಗಳನ್ನ ಹೊಸತಡಿಕಿಗೆ ಕಡೆದಿದ್ರು. ಜೊತೆಗೆ ನಗರದ ಮಟನ್ ಅಂಗಡಿಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕುರಿಗಳನ್ನ ಕಡೆದಿದ್ರು . ಈ ಬಾರಿ ಮಟನ್ ಅಂಗಡಿಗಳಲಂತೂ ಬ್ಯುಸಿನೆಸ್ ಶೇ 25 ರಷ್ಟು ಹೆಚ್ಚಿತ್ತು. ಮಾಂಸದ ಖರೀದಿ ಯಾವುದೇ ತೊಂದರೆ ಇಲ್ಲದೇ ಸುಸೂತ್ರವಾಗಿ ನಡೆದಿತ್ತು