Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ಯಾಂಡಲ್ ವುಡ್ ಗೆ ಬಂಪರ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ಯಾಂಡಲ್ ವುಡ್ ಗೆ ಬಂಪರ್
ಬೆಂಗಳೂರು , ಶುಕ್ರವಾರ, 9 ಆಗಸ್ಟ್ 2019 (16:13 IST)
ಸ್ಯಾಂಡಲವುಡ್ ಚಲನಚಿತ್ರಗಳು ಈ ಬಾರಿ ಭಾರೀ ಕಮಾಲ್ ಮಾಡಿದ್ದು, 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 10 ಪ್ರಶಸ್ತಿಗಳನ್ನ ತಮ್ಮ ಮುಡಿಗೇರಿಸಿಕೊಂಡಿವೆ. 

ಕನ್ನಡ ಸಿನಿಮಾಗಳು ಭಾರತೀಯ ಭಾಷೆಗಳ ಪೈಕಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರೋ ಗೌರವಕ್ಕೆ ಪಾತ್ರವಾಗಿವೆ.
ನಾಡಿನ ಫಿಲ್ಮ್ ಒಂದು ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಸೇರ್ಪಡೆಯಾಗಿದೆ. ನಾತಿಚರಾಮಿ ಸಿನಿಮಾ ಒಟ್ಟು 5 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ.

ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್, ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದ ಪ್ರಶಸ್ತಿ ಲಭಿಸಿದೆ.

ರಿಷಬ್ ಶೆಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಸತ್ಯ ಪ್ರಕಾಶ್ ರ ಒಂದಲ್ಲ ಎರಡಲ್ಲ ಸಿನಿಮಾ ರಾಷ್ಟ್ರೀಯ ಏಕೀಕರಣ ಮತ್ತು ಅತ್ಯುತ್ತಮ ಬಾಲ ನಟ ಪ್ರಶಸ್ತಿಗೆ ಭಾಜನವಾಗಿದೆ.

KGF ಸಿನಿಮಾಗೆ ಅತ್ಯುತ್ತಮ ವಿಎಫ್‍ಎಕ್ಸ್ ಮತ್ತು ಅತ್ಯುತ್ತಮ ಸಾಹಸ ನಿರ್ದೇಶನದ ಪ್ರಶಸ್ತಿ ಸಿಕ್ಕಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ನಿರಾಶ್ರಿತರಿಗಾಗಿ ಸಹಾಯ ಹಸ್ತ ನೀಡಿ- ಸಿಎಂ ಬಿಎಸ್ ವೈ ಮನವಿ