Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿ.ಎಸ್.ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ ನೀಡಿದ ರೈತ

ಬಿ.ಎಸ್.ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ ನೀಡಿದ ರೈತ
ಮಂಡ್ಯ , ಬುಧವಾರ, 11 ಡಿಸೆಂಬರ್ 2019 (16:18 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಧಿಕಾರಿಗಳಿಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.

ಸೂಕ್ತ ಪರಿಹಾರ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಹೀಗಂತ  ಮಂಡ್ಯದ  ಚಿಕ್ಕಸೋಮನಹಳ್ಳಿಯ ರೈತ ಶಿವಸ್ವಾಮಿ ಅವರಿಂದ ಅಧಿಕಾರಿಗಳಿಗೆ ಎಚ್ಚರಿಕೆ ಹಾಕಲಾಗಿದೆ.

ಮಂಡ್ಯದ  ಸಂತೇಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದ ರೈತರಾದ  ಗಾಡಿನಿಂಗೇಗೌಡರ ಪುತ್ರ ಶಿವಸ್ವಾಮಿ,  
ಸರ್ವೇ ನಂಬರ್ 39 ರಲ್ಲಿ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇಬ್ಬರೂ ಮಕ್ಕಳಿಗೆ ತಲಾ ಒಂದೊಂದು ಎಕರೆ ಭೂಮಿಯನ್ನು ಹಂಚಿದ್ದಾರೆ.
webdunia

ಕೇವಲ ಒಂದು ಎಕರೆ ಜೀವನಾಧಾರವಾದ ಕೃಷಿ ಭೂಮಿಯಲ್ಲಿ ವಿದ್ಯುತ್ ಲೈನನ್ನು ಎಳೆದಿರುವುದರಿಂದ  ಬೇಸಾಯ ಮಾಡಲಾಗದೇ ಅತಂತ್ರ ವಾತಾವರಣ ನಿರ್ಮಾಣವಾಗಿದೆ.

ದಿನದ 24 ಗಂಟೆಗಳ ಕಾಲವೂ ವಿದ್ಯುತ್ ಹರಿಯುವ  ಅಪಾಯಕಾರಿ 66/11ಕೆ.ವಿ ವಿದ್ಯುತ್ ಲೈನಿನ ಕೆಳಗೆ ಬೇಸಾಯ ನಡೆಸಿ ಬದುಕು ಸಾಗಿಸಬೇಕಾಗಿದೆ. ವಿದ್ಯುತ್ ಲೈನಿನ ಕೆಳಭಾಗದ ಗಿಡಮರಗಳು ಸಂಪೂರ್ಣವಾಗಿ ನಾಶವಾಗುತ್ತಿವೆ.
ಅಧಿಕಾರಿಗಳು ನಮ್ಮ ಮೇಲೆ  ದೌರ್ಜನ್ಯ ಮಾಡುತ್ತಿದ್ದಾರೆ. ನಾವು ಸತ್ತರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ನೊಂದ ರೈತ ಶಿವಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳು ನಮ್ಮನ್ನೆಲ್ಲ ಜೈಲಿಗೆ ಕಳಿಸುತ್ತೇವೆ ಎನ್ನುತ್ತಾರೆ.  ನಾವು ಜಮೀನು ಕೊಟ್ಟು ನಮ್ಮನ್ನೇ ಜೈಲಿಗೆ ಕಳಿಸುತ್ತಾರೆ. ನಮಗೆ ಇರೋದು ಒಂದೇ ಎಕರೆ ಜಮೀನು. ಜಮೀನು ಕಳೆದುಕೊಂಡು ನಾವು ಜೈಲಿಗೆ ಹೋಗಬೇಕಾ? ಅಂತ ರೈತ ಕೇಳಿದ್ದಾರೆ.

ಸರಕಾರ ನೆರವಿಗೆ ಬರುವಂತೆ ಕೋರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಹೇಳಿದ್ರಾ ಕುಮಾರಸ್ವಾಮಿ