ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಬಹುತೇಕ ಬಿಜೆಪಿ ರೆಬಲ್ ನಾಯಕರು ನಿರಾಕರಿಸಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಭಾರೀ ಮುಖಭಂಗಕ್ಕೆ ಕಾರಣವಾಗಿದೆ.
ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ ರಾಜು ಕಾಗೆ. ಬಿಜೆಪಿ ಸರ್ಕಾರ ನೀಡಿರುವ ನಿಗಮ ಸ್ಥಾನವನ್ನು ನಾನು ಸ್ವೀಕರಿಸಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿದ್ದು, ಸರ್ಕಾರ ನನಗೆ ನೀಡಿರುವ ನಿಗಮ ಸ್ಥಾನ ಅಳುವ ಮಕ್ಕಳಿಗೆ ಚಾಕಲೇಟ್ ಕೊಟ್ಟಂತಾಗಿದೆ. ಇದನ್ನು ಯಾವುದೇ ಕಾರಣಕ್ಕೆ ಸ್ವೀಕರಿಸುವದಿಲ್ಲ.
ಬೇರೆಯವರನ್ನು ಪಕ್ಷಕ್ಕೆ ತಂದು ಅವರ ಪರ ಪ್ರಚಾರಕ್ಕಾಗಿ ನಾನು ಹೋಗಲ್ಲಾ. ಕಾರ್ಯಕರ್ತರೊಂದಿಗೆ ಇನ್ನೊಮ್ಮೆ ಚರ್ಚಿಸಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ನಾನಿದ್ದೇನೆ. ಹೀಗಂತ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ.
ಈ ರಾಜಕೀಯ ಬೆಳವಣಿಗೆ ಬಗ್ಗೆ 15 ದಿನಗಳ ಹಿಂದೆ ಕಾರ್ಯಕರ್ತರ ಸಭೆ ಕರೆದು ಅವರ ಅನಿಸಿಕೆಗಳನ್ನು ಆಲಿಸಿದ್ದೇನೆ.
ನಂತರ ಬೆಂಗಳೂರಿನಲ್ಲಿ ಪಕ್ಷದ ಮುಖಂಡರನ್ನು ಭೇಟಿಯಾದಾಗ ನನಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಅನರ್ಹ ಶಾಸಕರ ಪರ ಪ್ರಚಾರ ಮಾಡಬೇಕೆಂದು ಹೇಳಿದ್ದಾರೆ. ವರಿಷ್ಠರ ನಿರ್ಧಾರವನ್ನು ನಿರಾಕರಿಸಿದ್ದೇನೆ. ನನಗೆ ನೀಡಿರುವ ಕಾಡಾ ನಿಗಮದ ಅಧ್ಯಕ್ಷ ಸ್ಥಾನ ಸ್ವೀಕರಿಸಬಾರದೆಂದು ಕಾರ್ಯಕರ್ತರ ನಿಲವು ಇದೆ ಎಂದ್ರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತೇನೆ:
ಬಿಜೆಪಿ ಪಕ್ಷದ ಹಿರಿಯ ಮುಖಂಡರು ನನಗೆ ಕಾಗವಾಡದಲ್ಲಿ ಟಿಕೆಟ್ ನೀಡಬೇಕು. ಇಲ್ಲದೆ ಹೋದಲ್ಲಿ ನಾನು ಪಕ್ಷೇತರ ಅಥವಾ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದುಕೊಂಡು ಚುನಾವಣೆ ಎದುರಿಸಲು ಸಿದ್ಧನಾಗಿದ್ದೇನೆ. ಮಾನಸಿಕವಾಗಿ ಚುನಾವಣೆಗೆ ಹೋಗುವ ವಿಚಾರ ದಟ್ಟಾಗಿದೆ ಎಂದಿದ್ದಾರೆ.