ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ದೃಷ್ಟಾಂತಗಳನ್ನು ನೋಡಿರುತ್ತಿರಾ. ಆದರೆ ನೀವು ಮುಂದೆ ಓದಲಿರುವ ಸಂಗತಿಯನ್ನು ಹಿಂದೆಂದೂ ಕೇಳಿರಲಾರಿರಿ.
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಯೊಬ್ಬ ಡೆತ್ ನೋಟ್ನ್ನು ಝೆರಾಕ್ಸ್ ಮಾಡಲು ಹೋದ ವಿಲಕ್ಷಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅದನ್ನು ಓದಿದ ಅಂಗಡಿಯಾತನ ಸಮಯಪ್ರಜ್ಞೆಯಿಂದ ಆತನ ಪ್ರಾಣವನ್ನು ಉಳಿದಿದೆ.
ದೇಶದ ಏಕೈಕ ಸಂಸ್ಕೃತ ಗ್ರಾಮ ಎಂಬ ಖ್ಯಾತಿಗೆ ಒಳಗಾಗಿರುವ ಮತ್ತೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ನಗರದ ಕಾಲೋಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಗಣೇಶ್ (ಹೆಸರು ಬದಲಿಸಲಾಗಿದೆ) ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಹೀಗಾಗಿ ಡೆತ್ ನೋಟ್ ಬರೆದ ಆತ ಅದನ್ನು ಝೆರಾಕ್ಸ್ ಮಾಡಲು ಅಂಗಡಿಗೆ ಹೋಗಿದ್ದ. ಅದನ್ನು ಓದಿದ ಅಂಗಡಿ ಮಾಲೀಕ ತಕ್ಷಣ ಆತನ ಪೋಷಕರಿಗೆ ಮತ್ತು ಕಾಲೇಜಿನ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ
ಹೌಹಾರಿದ ಪೋಷಕರು ತಕ್ಷಣ ಸ್ಥಳಕ್ಕಾಗಮಿಸಿ ಆತನಿಗೆ ಬುದ್ಧಿಮಾತು ಹೇಳಿ ಸಾವಿಗೆ ಶರಣಾಗುವುದನ್ನು ತಪ್ಪಿಸಿದ್ದಾರೆ.
ಒಟ್ಟಿನಲ್ಲಿ ಒಂದು ಜೀವ ಬದುಕುಳಿದಿದ್ದು ಆತ ಏಕೆ ಈ ನಿರ್ಧಾರಕ್ಕೆ ಕೈ ಹಾಕಿದ್ದ ಎಂದು ತಿಳಿದು ಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ