Select Your Language

Notifications

webdunia
webdunia
webdunia
webdunia

ಟ್ರ್ಯಾಕ್ಟರ್​​ಗೆ ಬೊಲೆರೋ ಡಿಕ್ಕಿ: ಐವರಿಗೆ ಗಾಯ,ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

ಟ್ರ್ಯಾಕ್ಟರ್​​ಗೆ ಬೊಲೆರೋ ಡಿಕ್ಕಿ: ಐವರಿಗೆ ಗಾಯ,ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ
ಹೊಸಕೋಟೆ , ಭಾನುವಾರ, 13 ಆಗಸ್ಟ್ 2023 (18:51 IST)
ಟ್ರ್ಯಾಕ್ಟರ್​​ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಐದು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಬಳಿ ನಡೆದಿದೆ. ಸ್ಥಳೀಯ ರೈತರು ಟ್ರಾಕ್ಟರ್​​ನಲ್ಲಿ ಹೊಲಕ್ಕೆ ಗೊಬ್ಬರ ತರಲು ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಹೊಸಕೋಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೊಲೆರೋ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಟ್ರಾಕ್ಟರ್ ಪಲ್ಟಿಯಾಗಿದೆ. ಈ ಸಂಬಂಧ ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ವಿಚಾರಕ್ಕೆ ಶುರುವಾಗಿತ್ತು ಕಿರಿಕ್