ಶ್ರೀರಾಂಪುರದಲ್ಲಿ ನಾಗರಾಜನ ಮನೆ ಮೇಲೆ ನಿನ್ನೆ ದಾಳಿ ನಡೆಸಿದ್ದ ಪೊಲೀಸರು ಸುಮಾರು 14.8 ಕೋಟಿ ರೂ, ಹಳೇನೋಟನ್ನ ವಶಪಡಿಸಿಕೊಂಡಿದ್ದರು. ಪೊಲೀಸರು ಇಂದೂ ಸಹ ತನಿಖೆ ಮುಂದುವರೆಸಿದ್ದು, ಪೊಲಿಸರು ಹುಡುಕಿದಷ್ಟೂ ನಾಗನ ಸಾಮ್ರಾಜ್ಯದ ಮತ್ತಷ್ಟು ವಿಷಯಗಳು ಬಹಿರಂಗವಾಗುತ್ತಿವೆ. ನಾಗರಾಜನ ವಿರುದ್ಧ ಮತ್ತೆ ರೌಡಿ ಶೀಟ್ ತೆರೆಯುಲು ನಿರ್ಧರಿಸಿರುವ ಪೊಲೀಸರು ಕೋಕಾ ಕಾಯ್ದೆ ಜಾರಿಗೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಗರಾಜನಸುಳಿವು ಕೊಟ್ಟಿದ್ಯಾರು: ಮಾಧ್ಯಮಗಳ ವರದಿ ಪ್ರಕಾರ, ನಾಗರಾಜನಜೊತೆ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಉಮೇಶ್ ಎಂಬಾತ ನಾಗನ ವಿರುದ್ಧ ದೂರು ನೀಡಿದ್ದ. ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಜೊತೆ ಬ್ಲ್ಯಾಕ್ ಅಂಡ್ ವೂಟ್ ದಂಧೆಯಲ್ಲಿ ಯೊಡಗಿದ್ದ ಆರೋಪದಡಿ 15 ದಿನಗಳ ಹಿಂದೆಯೇ ಪೊಲೀಸರು ಉಮೇಶನನ್ನ ಬಂಧಿಸಿದ್ದರು. ಬಾಂಬ್ ನಾಗನಿಂದ ಮೋಸ ಹೋಗಿದ್ದ ಉಮೇಶ್, ನಾಗನ ಮನೆಯಲ್ಲಿ ಕೋಟಿ ಕೋಟಿ ಹಣ ನೋಡಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನೆಂದು ಮಾಧ್ಯಮಗಳು ವರದಿ ಮಾಡಿವ.
ನಾಗರಾಜ ತಮಿಳುನಾಡಿನಲ್ಲಿ ಅಡಗಿರುವ ಶಂಕೆ ಇದ್ದು, ಮೊಬೈಲ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನ ನಾಗ ಬಳಸುತ್ತಿಲ್ಲ. ಹೀಗಾಗಿ, ನಾಗನನ್ನ ಹುಡುಕುತ್ತಿರುವ ಪೊಲೀಸರ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗಿದೆ ಎನ್ನಲಾಗಿದೆ.