Select Your Language

Notifications

webdunia
webdunia
webdunia
webdunia

ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್ : ರೇವಣ್ಣ

ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್ : ರೇವಣ್ಣ
ಹಾಸನ , ಗುರುವಾರ, 4 ಮೇ 2023 (07:30 IST)
ಹಾಸನ : ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು, ಗ್ರಾಮೀಣ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ.
 
ಈ ಬಾರಿಯ ಚುನಾವಣೆಯಲ್ಲಿ ಏಳೂ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೆಲವರು ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ,

ಅದು ದೊಡ್ಡದಾ ಇವತ್ತು ಎಂದು ಪ್ರಶ್ನಿಸಿದ ರೇವಣ್ಣ, ವರ್ಕ್ ಆರ್ಡರ್ ತಡೆ ಹಿಡಿಯುವುದೇ ಇವರ ಸಾಧನೆ. ತೋಟಗಾರಿಕಾ ಕಾಲೇಜು ಕಿತ್ತುಕೊಂಡರು. ಆದರೆ ಸ್ಥಳೀಯ ಶಾಸಕರು ಉಸಿರೇ ಬಿಡಲಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ತೆಗೆದು ನೋಡಲಿ, ರೋಡ್ಗೆ ಇವತ್ತು ಟಾರು ಹಾಕಿದ್ರೆ ಬೆಳಗ್ಗೆ ಕಿತ್ತು ಹೋಗ್ತಿದೆ. ಇಂಜಿನಿಯರ್ಗಳು, ಕಂಟ್ರ್ಯಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಬಿಟ್ಟು ಬೇರೆ ಯಾರೂ ಸಿಎಂ ಆಗಲು ಸಾಧ್ಯವಿಲ್ಲ : ಕುಮಾರಸ್ವಾಮಿ