ಬೆಂಗಳೂರು - ಎಎಪಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದುಕೊಂಡಿರುವ ಬೆನ್ನಲ್ಲೇ ಐಎನ್‌ಡಿಐಎ ಒಕ್ಕೂಟ ಒಡೆದು ಹೋಯಿತು ಎಂದು ಬಿಜೆಪಿ ಲೇವಡಿ ಮಾಡಿದೆ. ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಭಾನುವಾರ ಸಂದೇಶ ಹಂಚಿಕೊಂಡಿರುವ ಬಿಜೆಪಿ ಭಾರತ್ ತೋಡೋ ಯಾತ್ರೆ ವಿಫಲವಾಗಿದೆ ಎಂದು ಟೀಕಿಸಿದೆ. ಜೊತೆಗೆ, ಭಾರತವನ್ನು ಒಡೆಯಲು ಕಾಂಗ್ರೆಸ್ ಪಕ್ಷದ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ INDI ಮೈತ್ರಿ ಎಂದು ಹೆಸರಿಟ್ಟುಕೊಂಡು ಆ ಹೆಸರನ್ನಾದರೂ ಛಿದ್ರಗೊಳಿಸಿ ತೃಪ್ತರಾದರು.
ಯುವರಾಜನ ಕೈ ಹಿಡಿದು ಓಡಿದ ಕಾಂಗ್ರೆಸ್ಸಿಗರು ಸುಸ್ತಾದರು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಮಮತಾ ಬ್ಯಾನರ್ಜಿ ಓಡಿ ಹೋದರು. ಅರವಿಂದ ಕೇಜ್ರಿವಾಲಾ ಓಡಿ ಹೋದರು. ನಿತೀಶ್ ಕುಮಾರ್ ಹೊರ ಹೋದರು. ಸ್ಟಾಲಿನ್ ಓಡಲು ಸನ್ನದ್ಧರಾಗಿರುವರು. ರಾಹುಲ್ ಗಾಂಧಿ ಓಡುತ್ತಲೇ ಇರುವರು ಎಂದು ಬಿಜೆಪಿ ವ್ಯಂಗ್ಯವಾಡಿದೆ.