ಹಾವೇರಿ : ಸಾಮಾನ್ಯವಾಗಿ ಚುನಾವಣೆ ವೇಳೆ ಸಿಬ್ಬಂದಿಗಳು ಮತದಾರರಲ್ಲಿ ಐಡಿ ಕಾರ್ಡ್ ಕೇಳುತ್ತಾರೆ ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ವಿಚಾರ ತಿಳಿದಿದ್ದರೂ ಬಿಜೆಪಿ ಶಾಸಕ ಸಿಎಂ ಉದಾಸಿ ಅವರು ಮಾತ್ರ ಐಡಿ ಕಾರ್ಡ್ ಕೇಳಿದ್ದಕ್ಕೆ ಮತಗಟ್ಟೆ ಅಧಿಕಾರಿಗಳಿಗೆ ಅವಾಜ್ ಹಾಕಿ ದರ್ಪ ತೋರಿದ್ದಾರೆ.
ಹೌದು. ಇಂದು ಹಾವೇರಿಯಲ್ಲಿ ಹಾನಗಲ್ ಪಟ್ಟಣ್ಣಕ್ಕೆ ಮತದಾನ ಮಾಡುವುದಕ್ಕೆ ಆಗಮಿಸಿ ಶಾಸಕ ಸಿಎಂ ಉದಾಸಿ ಅವರ ಬಳಿ ಮತಗಟ್ಟೆ ಅಧಿಕಾರಿಗಳು ಕಾನೂನಿನ ಅನ್ವಯ ಐಡಿ ಕಾರ್ಡ್ ಅನ್ನು ಕೇಳಿದ್ದಾರೆ. ಇದರಿಂದ ಕೋಪಗೊಂಡ ಅವರು ಮತಗಟ್ಟೆ ಅಧಿಕಾರಿಗಳಿಗಳ ಮೇಲೆ ಗರಂ ಆಗಿದ್ದಾರೆ.
ಅಷ್ಟೇ ಅಲ್ಲದೇ ಐಡಿ ಕಾರ್ಡ್ ಕೇಳಿದ ಮತಗಟ್ಟೆ ಅಧಿಕಾರಿಗಳ ವಿರುದ್ದ ದೂರು ನೀಡುವ ಸಲುವಾಗಿ ಉದಾಸಿಯವರು ಚುನಾವಣಾ ಆಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಕೂಡ ಕಾನೂನಿನ ಅನ್ವಯ ತಮ್ಮ ಗುರುತಿನ ಚೀಟಿಯನ್ನು ತೋರಿಸ ಬೇಕಾಗಿದೆ ಆಂತ ಹೇಳಿದ್ದಾರೆ. ಒಬ್ಬ ಶಾಸಕನಾಗಿ ಸಿ.ಎಂ ಉದಾಸಿ ಅವರು ನಡೆದುಕೊಂಡ ರೀತಿಗೆ ತೀವ್ರ ಖಂಡನೆ ವ್ಯಕ್ತವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.