ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಮಣಿಸಿ, ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯವರು ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಸಕಲ ಸಿದ್ಧತೆ ನಡೆಸಿರುವ ಕಮಲಪಡೆ. ಪ್ರಿಯಾಂಕ ಖರ್ಗೆ ಅವರಿಗೆ ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಯನ್ನ ಕಲಬುರಗಿಯ ಚಿತ್ತಾಪುರದಲ್ಲಿ ಕಣಕ್ಕಿಳಿಸಲಿದ್ದಾರೆ. ಸ್ಥಳೀಯವಾಗಿ ಹೆಸರು ಇರುವ ಮತ್ತು ಸಮುದಾಯ ಪರ ಒಲವಿರುವ ವ್ಯಕ್ತಿಗೆ ಮಣೆ ಹಾಕಿದೆ. ಇಷ್ಟು ದಿನ ಮಣಿಕಂಠ್ ರಾಥೋಡ್ಗೆ ಟಿಕೆಟ್ ಎನ್ನುತ್ತಿದ್ದ ಕಮಲ ಪಡೆ, ಅವರ ಮೇಲಿನ ರೌಡಿಸಂ ಕೇಸ್ ಹಿನ್ನೆಲೆ ಆಧರಿಸಿ, ಪಾರ್ಟಿಗೆ ಡ್ಯಾಮೇಜ್ ಆಗಬಹುದೆಂಬ ಆತಂಕದಿಂದ ಮಣಿಕಂಠ್ ಬದಲು ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್ಗೆ ಗಾಳ ಹಾಕಿದೆ. 31 ವರ್ಷದ ಚೌಹಾಣ್ ಪರ ಚುನಾವಣಾ ಸಮಿತಿ ಒಲವು ತೋರಿದ್ದು, ಲಂಬಾಣಿ ಸಮುದಾಯದ ಚೌಹಾಣ್ ಪರ ಜಿಲ್ಲಾ ಕೋರ್ ಕಮಿಟಿ ಮತ್ತು ರಾಜ್ಯ ಕೋರ್ ಕಮಿಟಿಯಿಂದ ಹೆಸರು ರವಾನೆಯಾಗಿದೆ. ಈ ನಿಟ್ಟಿನಲ್ಲಿ ಚಿತ್ತಾಪುರದಲ್ಲಿ ಪ್ರಿಯಾಂಕ ಖರ್ಗೆ ಮಣಿಸಲು ಅರವಿಂದ್ ಚೌಹಾಣ್ಗೆ ಟಿಕೆಟ್ ನೀಡಲು ನಿರ್ಧಾರಿಸಲಾಗಿದ್ದು, ಗುಜರಾತ್ ಮಾದರಿಯಲ್ಲಿ ಯುವಕರ ಪಡೆ ಕಟ್ಟಲು ಬಿಜೆಪಿ ಸಿದ್ದವಾಗಿದೆ.