ಬಳ್ಳಾರಿಯ ಎಸ್`ಟಿ ಮೋರ್ಚಾ ಉಪಾಧ್ಯಕ್ಷ ಬಂಡಿ ರಮೇಶ್ ಎಂಬುವವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುಗ್ಗರಹಟ್ಟಿ ಡಾಬಾ ಬಳಿ 10-15 ಮಂದಿಯ ತಂಡ ಅಟ್ಟಾಡಿಸಿ ರಮೇಶ್ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಡಾಬಾದಲ್ಲಿದ್ದ ರಮೇಶ್ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಲಾಂಗ್ ಮತ್ತು ಮಚ್ಚುಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಬಂಡಿ ರಮೇಶ್ ಮೇಲೆ ದೂರುಗಳಿದ್ದು, ಇತ್ತೀಚೆಗೆ ತಾನೇ ಜಾಮೀನಿನ ಮೇಲೆ ಹೊರಬಂದಿದ್ದರು. ರಮೇಶ್`ಗಾಗಿ ಹೊಂಚು ಹಾಕಿ ಹತ್ಯೆ ನಡೆಸಲಾಗಿದೆ.
ಸ್ಥಳಕ್ಕೆ ಬಳ್ಳಾರಿ ಗ್ರಾಮಾಂತರ ಪೊಳಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಬಿಜೆಪಿಯಲ್ಲಿ ಈತ ಪ್ರಭಾವಿ ಮುಖಂಡನಾಗಿದ್ದ ಎನ್ನಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ