ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗಳಿಂದ ಬೇಸತ್ತು ಪಕ್ಷ ತೊರೆದಿರುವ ಮಾಜಿ ಮುಖ್ಯಮಂತ್ರಿ ಕಮಲಕ್ಕೆ ಸೇರಲು ಬಯಸುವುದಾದರೆ ಅವರಿಗೆ ಸ್ವಾಗತ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಮಡಿಕೇರಿಯಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, "ರಾಜ್ಯ ಕಂಡಂತ ಅತ್ಯಂತ ಸಜ್ಜನ ಮತ್ತು ಸುಸಂಸ್ಕೃತ ರಾಜಕಾರಣಿ ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರುವುದಾದರೆ ನಾವು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ಅವರ ಆಶೀರ್ವಾದ ಬಿಜೆಪಿಗೆ ಬೇಕು. "ಕೃಷ್ಣ ಅವರ ಚಿಂತನೆಗಳು ಬಿಜೆಪಿ ಪಕ್ಷದ ಧ್ಯೇಯಧೋರಣೆಗಳಿಗೆ ಹೋಲಿಕೆಯಾಗುವುದರಿಂದ ಅವರು ಕಮಲ ಪಾಳೆಯವನ್ನು ಸೇರಿದರೆ ಪಕ್ಷದ ಬಲವರ್ಧನೆಗೂ ಸಹಕಾರಿಯಾಗುತ್ತದೆ" ಎಂದಿದ್ದಾರೆ.
"ಅಧಿಕಾರಕ್ಕಾಗಿ ಎಂದೂ ಹಾತೊರೆಯದ ಕೃಷ್ಣ, ಕಾಂಗ್ರೆಸ್ ಪಕ್ಷದ ಧೋರಣೆಗಳಿಂದ ಬೇಸತ್ತು ಪಕ್ಷವನ್ನೇ ತೊರೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ", ಎಂದು ಡಿ.ವಿ.ಕೆ ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ