ರಾಜ್ಯದಲ್ಲಿ ಉರಿಗೌಡ-ನಂಜೇಗೌಡ ಉರಿ, ನಂಜು ಜೋರಾಗಿದೆ.. ಚುನಾವಣೆ ಸಮೀಪಿಸುತ್ತಿದ್ದು ಉರಿಗೌಡ-ನಂಜೇಗೌಡ ಚರ್ಚೆ ಜೋರಾಗೇ ನಡೀತಿದೆ.. ಉರಿಗೌಡ-ನಂಜೇಗೌಡ ವಿಚಾರ ಕುರಿತು KPCC ಅಧ್ಯಕ್ಷ D.K. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, BJPಯವರು ಇತಿಹಾಸ ತಿರುಚಲು ಹೊರಟಿದ್ದಾರೆ. ಬಸವಣ್ಣ, ಕುವೆಂಪು ಇತಿಹಾಸ ತಿರುಚಿದ್ದಾರೆ.. ಇದೀಗ ಟಿಪ್ಪು ಇತಿಹಾಸ ತಿರುಚಲು ಹೊರಟಿದ್ದಾರೆ ಎಂದು ಕಿಡಿಕಾರಿದ್ರು. ಸಚಿವ ಅಶ್ವಥ್ ನಾರಾಯಣ, ಶಾಸಕ C.T. ರವಿ, ಸಚಿವ ಮುನಿರತ್ನ ಸಿನಿಮಾ ಮಾಡಲು ಹೊರಟಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ 50 ಪುಸ್ತಕ ಇದೆ. ಅವರ ಚರಿತ್ರೆ ಅದರಲ್ಲಿ ಇದೆ.. ಈಗ ಹೊಸದಾಗಿ ಉರಿಗೌಡ-ನಂಜೇಗೌಡರನ್ನು ಹುಟ್ಟುಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದು ಕಾಲ್ಪನಿಕ ಕತೆ, ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದ್ರು. BJP ತಿರುಚಿದ ಇತಿಹಾಸದ ವಿರುದ್ಧ ಹೋರಾಟ ಮಾಡಬೇಕು, ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟ ನೇತೃತ್ವ ವಹಿಸಬೇಕು ಎಂದು ಡಿಕೆಶಿ ಒತ್ತಾಯಿಸಿದ್ರು. ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಂಸದ D.K. ಸುರೇಶ್, ಯಾರನ್ನು ಬೇಕಾದರು ಬಿಟ್ಟು ವ್ಯಾಪಾರ ಮಾಡುವ ಪ್ರವೃತಿ ಇರುವ ವ್ಯಕ್ತಿ ಸಚಿವ ಮುನಿರತ್ನ.. ಆ ವ್ಯಕ್ತಿಯನ್ನು ನಿರ್ಮಲಾನಾಥನಂದ ಶ್ರೀ ಯಾಕೆ ಕರೆಸಿದ್ರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.