ಬಿಜೆಪಿಯ ಮಾಜಿ ಸಚಿವ ಹರತಾಳು ಹಾಲಪ್ಪ ನಿರ್ದೋಷಿಯಾಗಿ ಹೊರ ಬಂದಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಿಂದ ಶಿವಮೊಗ್ಗ ಕೋರ್ಟ್ ಅವರನ್ನ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಹಾಲಪ್ಪ ಖುಲಾಸೆಯಾಗಿ ಹೊರ ಬಂದಿರುವುದು ಬಿಜೆಪಿಯಲ್ಲಿ ರಾಜಕೀಯ ಇಕ್ಕಟ್ಟಿಗೆ ಕಾರಣವಾಗಿದೆ.
ಹೌದು, ಹಾಲಪ್ಪ ಈ ಹಿಂದೆ ಸೊರಬ ಕ್ಷೇತ್ರದ ಶಾಸಕರಾಗಿದ್ದರು. ಆಹಾರ ಸಚಿವರಾಗಿದ್ದ ಹಾಲಪ್ಪ ಆರೋಪ ಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ, ಅವರು ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಲುವ ಸಾಧ್ಯತೆ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಹಾಲಪ್ಪ ಟಿಕೆಟ್ ಕೇಳುವ ಸಾಧ್ಯತೆ ಇದೆ. ಆದರೆ, ಇಲ್ಲೇ ಇರುವುದು ಸಮಸ್ಯೆ.
ಈಗಾಗಲೇ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು. ಸೊರಬ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷ ಸೇರುವಾಗಲೇ ಅವರಿಗೆ ಈ ಭರವಸೆ ನೀಡಲಾಗಿದೆ ಎಂಬ ಮಾತುಗಳೂ ಇವೆ. ಈಗ ಸೊರಬ ಕ್ಷೇತ್ರದ ಟಿಕೆಟ್`ಗಾಗಿ ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಮಲ ಪಾಳಯ ಯಾರಿಗೆ ಮಣೆ ಹಾಕುತ್ತೋ ಕಾದುನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ