ಬಿಜೆಪಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ದಾಂಪತ್ಯ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚ್ಛೇದನ ಕೋರಿ ಅವರ ಪತ್ನಿ ಸವಿತಾ ಕೋರ್ಟ್ ಮೊರೆ ಹೋಗಿದ್ದಾರೆ.
ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಮಾಜಿ ಶಾಸಕರ ಪತ್ನಿ ಸವಿತಾ, 2.5 ಕೋಟಿ ಬೆಲೆಯ ಆಸ್ತಿ, ತಿಂಗಳಿಗೆ 1.5 ಲಕ್ಷ ರೂಪಾಯಿ ಜೀವನಾಂಶ ಹಾಗೂ 5 ಲಕ್ಷ ರೂಪಾಯಿ ಕೋರ್ಟ್ ವೆಚ್ಚ ನೀಡುವಂತೆ ಕೋರಿ ಎಂ.ಪಿ.ಕುಮಾರಸ್ವಾಮಿ ಅವರಿಗೆ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂಡಿಗೆರೆ ಕೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಲವು ತಿಂಗಳಿಂದ ಮನೆಗೆ ತೆರಳದೇ ವಿಧಾನ ಸೌಧದ ಶಾಸಕರ ಭವನದಲ್ಲಿ ವಾಸ್ತವ್ಯ ಹೊಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಜೂನ್ 23ರಂದು ಅವರ ಪತ್ನಿ ಸವಿತಾ ವಿಧಾನಸೌಧಕ್ಕೆ ಬಂದು, ಪತಿಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದರು.
ಪತ್ನಿಯ ಒತ್ತಾಯಕ್ಕೆ ಗರಂ ಆದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನಸೌಧದ ಎದುರಲ್ಲೆ ಪತ್ನಿ ಸವಿತಾ ಅವರ ಮೇಲೆ ಹಲ್ಲೆ ಮಾಡಿದ್ದರು.
ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ