Webdunia - Bharat's app for daily news and videos

Install App

ದಾಂಡಿಯಾ ನೈಟ್: ವಿದ್ಯಾರ್ಥಿನಿಯರ ಬಿಂದಾಸ್ ಸ್ಟೆಪ್ಸ್

Webdunia
ಬುಧವಾರ, 17 ಅಕ್ಟೋಬರ್ 2018 (13:22 IST)
ಅಲ್ಲಿ ಅಬ್ಬರದ ಸಂಗೀತ ಮನೆಮಾಡಿತ್ತು. ತಾಳಕ್ಕೆ ತಕ್ಕಂತೆ ನೂರಾರು ಯುವತಿಯರು ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿನಿಯರ ಡ್ಯಾನ್ಸ್ ಗೆ ಉಪನ್ಯಾಸಕಿಯರೂ ಸಾಥ್ ನೀಡಿದರು. ನವರಾತ್ರಿ ಅಂಗವಾಗಿ ನಡೆದ ಕಲರ್ ಫುಲ್ ದಾಂಡಿಯಾ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ನವರಾತ್ರಿ ಸಡಗರ ಎಲ್ಲೆಡೆ ಮನೆಮಾಡಿದ್ದರೆ ಬಿಸಿಲು ನಗರಿ ಖ್ಯಾತಿಯ ಕಲಬುರಗಿಯಲ್ಲಿ ವಿಭಿನ್ನವಾಗಿಯೇ ಹಬ್ಬದ ಸಡಗರವನ್ನು ಆಚರಣೆ ಮಾಡಲಾಗುತ್ತಿದೆ. ಹೈದ್ರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ಎಲ್ಲಾ ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರು ಭಿನ್ನವಾಗಿಯೇ ನವರಾತ್ರಿ ಆಚರಿಸಿ, ಖುಷಿ ಪಟ್ಟರು.

ಕಲಬುರಗಿ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ದಾಂಡಿಯಾ ನೈಟ್ ಗಮನ ಸೆಳೆಯಿತು. ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿನಿಯರು ಬಗೆ ಬಗೆಯ ಹಾಗೂ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಹಾಡಿ, ಕುಣಿದು ಸಂಭ್ರಮಿಸಿದರು.
ವಿದ್ಯಾರ್ಥಿನಿಯರು ಮಾತ್ರವಲ್ಲದೇ ಉಪನ್ಯಾಸಕರು ಸಹ ಜಾನಪದ ನೃತ್ಯಗಳಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು. ನವರಾತ್ರಿ ಹಬ್ಬದ ಪರಂಪರೆ ಉಳಿಸುವ ಹಾಗೂ ಮಕ್ಕಳಲ್ಲಿ ಹಬ್ಬದ ಅರಿವು ಮೂಡಿಸುವ ನಿಟ್ಟಿನಲ್ಲಿ ದಾಂಡಿಯಾ ನೈಟ್ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲರಾದ ಉಮಾ ರೇವೂರು ಹೇಳಿದ್ದಾರೆ.

ವಿದ್ಯಾರ್ಥಿನಿಯರ ಡ್ಯಾನ್ಸ್ ಝಲಕ್ ದಾಂಡಿಯಾ ನೈಟ್ ಗೆ ಆಗಮಿಸಿದವರಲ್ಲಿ ಸಂತಸಕ್ಕೆ ಕಾರಣವಾಯಿತು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments