Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣದಿಂದ ಕುಮಾರಸ್ವಾಮಿಗೆ ಬಿಗ್ ರಿಲೀಫ್

ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣದಿಂದ ಕುಮಾರಸ್ವಾಮಿಗೆ ಬಿಗ್ ರಿಲೀಫ್
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (10:49 IST)
ಬೆಂಗಳೂರು : ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ಕೈಬಿಟ್ಟು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.



ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ ಐಟಿ ಅಧಿಕಾರಿಗಳು ಗಂಗಾರಾಮ್ ಬಡೇರಿಯಾ ಬಂಧಿಸಿ ವಿಚಾರಣೆ ನಡೆಸಿದಾಗ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ವಿನೋದ್ ಘೋಯಲ್‍ಗೆ ಭೂಮಿ ಮಂಜೂರು ಮಾಡುವಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾಗೆ ಮೌಖಿಕವಾಗಿ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿತ್ತು.

 

ಆದರೆ ವಿಚಾರಣೆ ಬಳಿಕ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಅಲ್ಲದೇ ವಿನೋದ್ ಘೋಯಲ್ ಮೂಲಕ ತನ್ನ ಮಗ ಗಗನ್ ಬಡೇರಿಯಾ ಅಕೌಂಟ್‍ಗೆ ಗಂಗಾರಾಮ್ ಹಣ ಹಾಕಿಸಿಕೊಂಡಿದ್ದರು ಎನ್ನಲಾಗಿದೆ.  ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ಕೈಬಿಟ್ಟು ವಿನೋದ್ ಘೋಯಲ್ ಮತ್ತು ಗಗನ್ ಬಡೇರಿಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಭಿಕ್ಷೆ ಬೇಡಿ ಕೇಂದ್ರ ಸರ್ಕಾರದ ಕಣ್ಣು ತೆರೆಸುತ್ತೇನೆ.- ಸಂತ್ರಸ್ತರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ