Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿದ್ದೆ ಮಾತ್ರೆ ಸೇವಿಸಿದ್ದ ಪ್ರಥಮ್ ಕಿಮ್ಸ್ ಆಸ್ಪತ್ರೆಗೆ ದಾಖಲು

ನಿದ್ದೆ ಮಾತ್ರೆ ಸೇವಿಸಿದ್ದ ಪ್ರಥಮ್ ಕಿಮ್ಸ್ ಆಸ್ಪತ್ರೆಗೆ ದಾಖಲು
ಬೆಂಗಳೂರು , ಗುರುವಾರ, 6 ಏಪ್ರಿಲ್ 2017 (08:10 IST)
ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆಸ್ಪತ್ರೆಯಲ್ಲೂ ಗಲಾಟೆ ಮಾಡಿದ್ದಾರೆ. ಫೋರ್ಟಿಸ್ ಆಸ್ಪತ್ರೆಯ ಐಸಿಯೂನಲ್ಲಿ ಗಲಾಟೆ ಮಾಡಿದ್ದು, ಕೆಲ ವಸ್ತುಗಳನ್ನ ಒಡೆದು, ಬೆತ್ತಲೆ ಓಡಾಡಿ ರೋಗಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಬಳಿಕ ವೈದ್ಯರ ಸಲಹೆ ಮೇರೆಗೆ ನಿಮ್ಹಾನ್ಸ್`ಗೆ ದಾಖಲು ಮಾಡಲು ಪೋಷಕರು ಮುಂದಾಗಿದ್ದರು. ಆದರೆ,ನಿಮ್ಹಾನ್ಸ್`ಗೆ ಹೋಗಲು ಪ್ರಥಮ್ ನಿರಾಕರಿಸಿದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಸ್ನೇಹಿತ ಲೋಕೇಶ್, ಆಸ್ಪತ್ರೆಗೆ ಭೇಟಿ ನೀಡಿ ಪ್ರಥಮ್ ಆರೋಗ್ಯ ವಿಚಾರಿಸಿದ್ದಾರೆ. ಪ್ರಥಮ್ ಪೂರ್ಣ ಗುಣಮುಖರಾದ ಬಳಿಕ ಎರಡೂ ಕುಟುಂಬದವರೂ ಸೇರಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಸಂಧಾನ ಮಾಡಿಕೊಳ್ಳುವ ಕುರಿತು ಲೋಕೆಶ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

                        

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ನಿನಗೆ ಯೋಗ್ಯತೆಯಿದ್ರೆ ಸಾಲ ಮನ್ನಾ ಮಾಡು: ಬಿಎಸ್‌ವೈ