ಇಡೀ ಕರವಾಳಿ ಹಾಗೂ ದೇಶವನ್ನೇ ಬೆಚ್ಚಿ ಬೀಳಿಸಿದ ಅನಿವಾಸಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಸುಪ್ರೀಮ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆದ್ರೆ ಸದ್ಯಕ್ಕೆ ರಾಜೇಶ್ವರಿ ಶೆಟ್ಟಿಗೆ ಬಿಡುಗಡೆ ಭಾಗ್ಯ ಇಲ್ಲ. ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರಮುಖ 36 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಬಳಿಕವೇ ರಾಜೇಶ್ವರಿ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಮ್ ಕೋರ್ಟು ಉಡುಪಿ ಜಿಲ್ಲಾ ಸತ್ರ ನ್ಯಾಯಾಲಕ್ಕೆ ಆದೇಶ ನೀಡಿದೆ.
ಎಸ್. ಎ. ಬೋಬ್ಡೆ ಮತ್ತು ಎಲ್ನಾ. ನಾಗೇಶ್ವರ ರಾವ್ ವಿಭಾಗೀಯ ಪೀಠ ಸೋಮವಾರ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಭಂದಿಸಿ 164 ಸಾಕ್ಷಿಗಳ ಪೈಕಿ 36 ಮಂದಿಯನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಎಂದು ಆದೇಶ ನೀಡಿದೆ. ಅರೋಪಿಗಳ ಪರ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಶೈಲೇಶ್ ಮಡಿಯಾಳ ವಕಾಲತ್ತು ವಹಿಸಿದ್ದು ಹಿರಿಯ ನ್ಯಾಯವಾದಿ ಬಸವ ಪ್ರಭು ಪಾಟೀಲ್ ವಾದ ಮಂಡಿಸಿದ್ದಾರೆ.