Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿಯನ್ನು ಹತ್ಯೆ ಮಾಡಿ ಫೇಸ್ ಬುಕ್ ಲೈವ್ ಮಾಡಿದ್ದ ಪಾಪಿ ಪತಿಗೆ ದೇವರೇ ಶಿಕ್ಷೆ ಕೊಟ್ಟರು

Arrest

Krishnaveni K

ಬೆಂಗಳೂರು , ಬುಧವಾರ, 7 ಆಗಸ್ಟ್ 2024 (09:53 IST)
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ನಿಯನ್ನು ಹತ್ಯೆ ಮಾಡಿ ಫೇಸ್ ಬುಕ್ ಲೈವ್ ಮಾಡಿದ್ದ ಪಾಪಿ ಪತಿ ಬಗ್ಗೆ ಓದಿರುತ್ತೀರಿ. ಆ ವ್ಯಕ್ತಿಗೆ ಈಗ ದೇವರೇ ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ.

ತಬರೇಷ್ ಪಾಷಾ ಎಂಬಾತ ಪತ್ನಿಯನ್ನು ಆಕೆಯ ತವರು ಮನೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಬಳಿಕ ಈ ವಿಚಾರವನ್ನು ಮಹಾನ್ ಸಾಧನೆ ಮಾಡಿದವನಂತೆ ಫೇಸ್ ಬುಕ್ ಲೈವ್ ನಲ್ಲಿ ವಿವರಿಸಿದ್ದಾನೆ. ಘಟನೆ ಬಳಿಕ ಆತ ಕೋಲಾರಕ್ಕೆ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ಕೋಲಾರದಲ್ಲಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ಹೋದಾಗ ಅವರಿಂದ ತಪ್ಪಿಸಿಕೊಳ್ಳಲು ಆರೋಪಿ 12 ನೇ ಮಹಡಿಯಿಂದ ಜಿಗಿದಿದ್ದಾನೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆ. ಈ ಮೂಲಕ ಪತ್ನಿಯ ಹತ್ಯೆ ಮಾಡಿದ್ದ ಪಾಪಿ ಪತಿಗೆ ದೇವರೇ ಶಿಕ್ಷೆ ಕೊಟ್ಟಂತಾಗಿದೆ.

ತನ್ನ ಜೊತೆ ಜಗಳವಾಡಿಕೊಂಡು ತವರಿಗೆ ಹೋಗಿದ್ದ ಪತ್ನಿ ಫಾಜೀಲ್ ಫಾತಿಮಾ ಮೇಲಿನ ಸಿಟ್ಟಿನಿಂದ ಆಕೆಯ ತವರು ಮನೆಗೆ ಹೋಗಿದ್ದ ಆರೋಪಿ ತಬರೇಷ್ ಅತ್ತೆಯ ಎದುರೇ ಚಾಕುವಿನಿಂದ ಪತ್ನಿಗೆ ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ವೇಳೆ ತನ್ನ ಘನಂದಾರಿ ಕೆಲಸವನ್ನು ಫೇಸ್ ಬುಕ್ ಲೈವ್ ನಲ್ಲಿ ವಿವರಿಸಿದ್ದ. ಈತ ಈ ಹಿಂದೆ ಕೆಲವು ಸರಗಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ. ತವರಿಗೆ ಹೋಗಿದ್ದ ಪತ್ನಿಯನ್ನು ಮರಳಿ ಬರಲು ಕಾಟ ಕೊಡುತ್ತಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಹೀಗಾಗಿ ಆಕೆಯ ಜೀವವನ್ನೇ ತೆಗೆದಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಡೆಂಗ್ಯೂ ಬಲು ದುಬಾರಿ: ನಿಮ್ಮ ಏರಿಯಾದಲ್ಲಿ ಪರೀಕ್ಷೆಗೆ ಎಷ್ಟು ಚಾರ್ಜ್ ಮಾಡ್ತಿದ್ದಾರೆ