ಮದ್ಯಪಾನ ಬಿಡಿಸಲು ಸ್ವಾಮೀಜಿಯೊಬ್ಬರು ಕೊಟ್ಟ ನಾಟಿ ಔಷಧ ತಿಂದ ಯುವಕ ಸಾವಿಗೀಡಾಗಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹುಣ್ಣಿಕೇರಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜುಮನಾಳ ಗ್ರಾಮದ ಸಿದ್ದರಾಯನಾಯಕ ಮೃತ ದುರ್ದೈವಿ.
ಸ್ವಾಮೀಜಿ ಶಿವಪ್ಪ ಬಾವಿ ಎಂಬುವವರು ಮದ್ಯಪಾನ ಬಿಡಿಸಲು ಸಿದ್ದರಾಯ ನಾಯಕನಿಗೆ ನಾಟಿ ಔಷಧ ನೀಡಿದ್ದರು ಎನ್ನಲಾಗಿದೆ. ಮಾರ್ಚ್ 18ರಂದು ಯುವಕ ಮೃತಪಟ್ಟಿದ್ದಾನೆ. ಸ್ವಾಮೀಜಿ ವಿರುದ್ಧ ಆರೋಪ ಕೇಳಿಬಂದಿದೆ.
ಮೊದಲಿಗೆ ರಾಜೀ ಸಂಧಾನದ ಮೂಲಕ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನವೂ ನಡೆದಿದೆ ಎಂದು ತಿಳಿದುಬಂದಿದೆ. ಸ್ವಾಮೀಜಿಯನ್ನ ವಶಕ್ಕೆ ಪಡೆದಿರುವ ನೇಸರ್ಗಿ ಪೊಲೀಸೆರು ವಿಚಾರಣೆ ನಡೆಸುತ್ತಿದ್ದಾರೆ.