ರಾಜಕಾಲುವೆ ಮೇಲೆ ನಿಂತಿರುವ ಒರಾಯನ್ ಮಾಲ್ ತೆರುವು ಖಚಿತ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಒರಾಯನ್ ಮಾಲ್ ಕಟ್ಟಡವಿರುವ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು ಸರ್ವೆ ಕಾರ್ಯ ಮುಕ್ತಾಯಗೊಂಡ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು
ರಾಜಕಾಲುವೆ ಮೇಲೆ ಯಾರೇ ಕಟ್ಟಡ ಕಟ್ಟಿದ್ದರೂ ತೆರುವುಗೊಳಿಸುವುದು ಖಚಿತ. ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎನ್ನುವ ತಾರತಮ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯಿದೆ. ಆದ್ದರಿಂದ ಬೆಂಗಳೂರು ನಗರವನ್ನು ಚೆನ್ನೈ ಮುಂಬೈ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ನಟ ದರ್ಶನ್ ನಿವಾಸ ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ ಎನ್ನುವ ಆರೋಪಗಳಿದ್ದರೂ ಅವರಿಗೆ ಸರಕಾರ ಕ್ಲೀನ್ ಚಿಟ್ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ