ನಗರದ 1,400 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿ ಇರುವ ವ್ಯಾಪಾರಿಗಳ ತೆರವಿಗೆ ಬಿಬಿಎಂಪಿ ಯೋಚಿಸಿದೆ. ಪಾದಚಾರಿಗಳಿಗೆ ಇದರಿಂದ ಸಮಸ್ಯೆ ಆಗ್ತಿದೆ ಎಂಬ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಲಾಗುತ್ತಿದೆ. ರಾಜಕಾಲುವೆ ಒತ್ತುವರಿ ತೆರವು ಆಯ್ತು, ಈಗ ಬೀದಿಬದಿ ಒತ್ತುವರಿ ತೆರವಿಗೆ ಪಾಲಿಕೆ ನಿರ್ಧಾರ ಮಾಡಿದೆ. ಬೆಂಗಳೂರಿನ ಬೀದಿ ಉದ್ದಕ್ಕೂ ತಳ್ಳೋಗಾಡಿ, ಸಣ್ಣಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಈ ಮೂಲಕ ಬಿಬಿಎಂಪಿ ಶಾಕ್ ನೀಡಿದೆ. ಬೀದಿ ಬದಿ ಜಾಗ ಒತ್ತುವರಿಯನ್ನು ತೆರವು ಮಾಡೊಕೆ ಪಾಲಿಕೆ ಮುಂದಾಗಿದೆ ರಸ್ತೆಯುದ್ದಕ್ಕೂ ತಳ್ಳುವ ಗಾಡಿ ಹಾಕಿ ಜಾಗ ಒತ್ತುವರಿ ಮಾಡಿಕೊಂಡ ಸ್ಥಳದ ತೆರವು ಮಾಡಲು ಬಿಬಿಎಂಪಿ ತೆರೆ ಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಹೊಸ ಸರ್ವೇ ನಡೆಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಕಾರಿಗಳಿಗೆ ಸೂಚನೆ ನೀಡಿದ್ದಾರೆ.