ಬಿಬಿಎಂಪಿಯ 19 ಶಾಲಾ ಕಟ್ಟಡಗಳಲ್ಲಿ ಆತಂಕದ ಛಾಯೆ ಆವರಿಸಿದೆ.ಅನಾಹುತಕ್ಕೆ ಶಿಥಿಲಾವಸ್ಥಿಯಲ್ಲಿರು ಶಾಲಾ ಕಟ್ಟಡಗಳು ಬಾಯಿತೆರೆದು ಕುಳಿತ್ತಿದೆ.ಶಿಥಿಲವಾಸ್ಥಿಯಲ್ಲಿರುವ ಕಟ್ಟಡಗಳ ಬಗ್ಗೆ ಇಂಜಿನಿಯರಿಂಗ್ ವಿಭಾಗದಿಂದ ಆಡಿಟ್ ರಿಪೋರ್ಟ್ ಸಲ್ಲಿಸಲಾಗಿದೆ. ಬಿಬಿಎಂಪಿಯ ಒಟ್ಟು 163 ಶಾಲೆಗಳ ಫೈಕಿ 19 ಶಾಲೆಗಳ ತೆರವಿಗೆ ಸಮಿತಿ ಶಿಫಾರಸ್ಸು ಮಾಡಲಾಗಿದೆ.
67 ಶಾಲೆಗಳ ದುರಸ್ಥಿಗೂ ಕಮಿಟಿಯಿಂದ ಶಿಫಾರಸು ಮಾಡಲಾಗಿದೆ.ಬಿಬಿಎಂಪಿ ನಿರ್ವಾಹಣೆಯಲ್ಲಿರುವ 167 ಶಾಲೆಗಳ ಪೈಕೆ 73 ಶಾಲೆಗಳಷ್ಟೆ ಸೇಫ್ ಆಗಿದೆ.ಉಳಿದ 94 ಶಾಲಾ ಕಟ್ಟಡಗಳಲ್ಲಿ 67 ಶಾಲಾ ಕಟ್ಟಡಗಳನ್ನು ದುರಸ್ಥಿಗೊಳಿಸಲು, ಹಾಗೂ 19 ಶಾಲೆಗಳನ್ನು ಕೆಡವಿ ಮರು ನಿರ್ಮಾಣ ಮಾಡಲು ಇಂಜಿನಿಯರಿಂಗ್ ವಿಭಾಗದಿಂದ ಬಿಬಿಎಂಪಿಗೆ ಶಿಫಾರಸು ಮಾಡಲಾಗಿದೆ.ಪೂರ್ವ ವಲಯದ 12, ಪಶ್ಚಿಮ ವಲಯದ 06, ದಕ್ಷಿಣ ವಲಯದ 01 ಶಾಲೆಗಳು ಶಿಥಿಲಾವಸ್ಥಿಯಲ್ಲಿ ಇದೆ.ಶಿವಾಜಿ ನಗರ ನರ್ಸರಿ ಶಾಲೆ ಕಟ್ಟಡ ಕುಸಿದ ಪ್ರಕರಣದ ನಂತರ ಟೆಕ್ನಲ್ ಕಮಿಟಿಗೆ ರಿಪೋರ್ಟ್ ಕಮಿಷನರ್ ಕೇಳಿದ್ದಾರೆ.
ಯಾವ್ಯಾವ ವಲಯದ ಶಾಲಾ ಕಟ್ಟಡಗಳಲ್ಲಿ ಆಂತಕ ? - ಇಲ್ಲಿದೆ ಡಿಟೈಲ್ಸ್
ವಲಯ - ದುರಸ್ಥಿ - ಮರು ನಿರ್ಮಾಣ
ಪೂರ್ವ - 24 - 12
ಪಶ್ಚಿಮ - 32 - 06
ದಕ್ಷಿಣ- 08 - 01
ಮಹಾದೇವ ಪುರ- 01 - 00
RRನಗರ - 01- 00
ಬೊಮ್ಮನಹಳ್ಳಿ- 01- 00
ಬಿಬಿಎಂಪಿ ನಿರ್ವಾಹಣೆಯಲ್ಲಿರುವ ಎಲ್ಲ ಶಾಲೆ ಹಾಗೂ ಆಸ್ಪತ್ರೆ ಕಟ್ಟಡಗಳ ಸುರಕ್ಷಿತಗೆ ರಿಪೋರ್ಟ್ ಕೇಳಿದ್ವಿ .ಇಂಜಿನಿಯರಿಂಗ್ ವಿಭಾಗದಿಂದ ತಾಂತ್ರಿಕವಾಗಿ ಕಟ್ಟಡಗಳ ಕ್ವಾಲಿಟಿ ಚಕ್ ಮಾಡಲಾಗಿದೆ .167 ಶಾಲೆಗಳ ಪೈಕಿ 19 ಶಾಲೆಯ ಕಟ್ಟಡಗಳು ಹಳೆಯದಾಗಿದ್ದು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಟೆಕ್ನಿಕಲ್ ಕಮಿಟಿ ಶಿಫಾರಸ್ಸು ಮಾಡಿದೆ .
ಕೆಲವು ಶಾಲೆಗಳಲ್ಲಿ ಸಣ್ಣ ಪುಟ್ಟ ದುರಸ್ಥಿ ಕೆಲಸಗಳಿವೆ ಹಾಗೂ ಮೂರು ಆಸ್ಪತ್ರೆಗಳನ್ನು ಸಹ ಮರು ನಿರ್ಮಾಣ ಮಾಡಬೇಕಿದೆ.ತಕ್ಷಣವೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಯತಂತ್ರ ರೂಪಿಸಿ ಟೆಂಡರ್ ಕರೆಯಲಾಗುವುದು.ಉಳಿದಂತೆ ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ಕಟ್ಟಡಗಳ ಕ್ವಾಲಿಟಿ ಬಗ್ಗೆ ಸಹ ರಿಪೋರ್ಟ್ ಕೇಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.