ರಾಜಧಾನಿಯ 120 ಕ್ಕೂ ಹೆಚ್ಚಿನ ಪಾರ್ಕ ಗಳಲ್ಲಿ ರುವ ತೆರೆದ ಜಿಮ್ ಉಪಕರಣಗಳು ಮೆಂಟನನ್ಸ್ ಇಲ್ಲದೆ ತುಕ್ಕು ಹಿಡಿದು ಹಾಳಾಗಿವೆ.ಉದ್ಯಾನ ನಗರಿ ಬೆಂಗಳೂರಿನಲ್ಲಿ 1200 ಪಾರ್ಕ್ ಗಳಿವೆ.ದುರಸ್ತಿ ಹಾಗೂ ಕಾರ್ಯ ನಿರ್ವಹಣೆ ಗೆ ಬಿಬಿಎಂಪಿ ಅನುದಾನ ಮೀಸಲಿಟ್ಟಿಲ್ಲ.ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಾಯುವಿಹಾರಕ್ಕೆ ಹಾಗೂ ದೈಹಿಕ ಕಸರತ್ತು ಮಾಡಲು ಅನುಕೂಲವಾಗಿವೆ
ತೆರೆದ ಜಿಮ್ ಗಳು.ಪಾಲಿಕೆಯ ಪೂರ್ವ ವಲಯದ 110 ದಕ್ಷಿಣ ವಲಯದ 79 ಹಾಗೂ ಯಲಹಂಕ ದ ವಲಯದಲ್ಲಿ 57 ಪಾರ್ಕ್ ಗಳಿಗೆ ಜಿಮ್ ಉಪಕರಣಗಳು ಅಳವಡಿಸಲಾಗಿದೆ.ಇವುಗಳ ದುರಸ್ತಿಗೆ ಅನುದಾನಕ್ಕೆ ಈಗಾಗಲೇ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಇವುಗಳಲ್ಲಿ ಪೂರ್ವ ವಲಯದ 52 ಯಲಹಂಕ ವಲಯದ 30 ಜಿಮ್ ಉಪಕರಣಗಳು ಹಾಳಾಗಿವೆ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಆರ್ ಶಿಲ್ಪಾ ಹೇಳಿದಾರೆ.