ಬೆಂಗಳೂರು ನಗರದ ಹೊರಭಾಗಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಬಿಬಿಎಂಪಿ ಇತ್ತೀಚೆಗೆ ಕಟ್ಟಡ ಮಾಲಿಕರಿಗೆ ನೊಟೀಸ್ ಜಾರಿ ಮಾಡಲು ಪ್ರಾರಂಭಿಸಿದೆ.
ನಿರ್ಮಾಣ ನಿಯಮಗಳ ಉಲ್ಲಂಘನೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.09 ರ ವೇಳೆಗೆ ವರದಿ ಸಲ್ಲಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ.ಬಿಬಿಎಂಪಿಯಲ್ಲಿನ ಈ ಬೆಳವಣಿಗೆಯಿಂದ ಸಾರ್ವಜನಿಕರು ಮನೆ-ಮನೆಗಳಿಗೆ ಯೋಜನೆಯ ಅನುಮೋದನೆ (plan approval) ದಾಖಲೆಗಳನ್ನು ನೀಡುವಂತೆ ನೊಟೀಸ್ ಬರಲಿದೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ.
ಬಿ'ಖಾತೆಗಳ ನಿವೇಶನಗಳ (ಇನ್ನಷ್ಟೇ ವಸತಿಯೋಗ್ಯ ಭೂಮಿಯಾಗಿ ಮಾರ್ಪಾಡಾಗಬೇಕಿರುವ ಕಂದಾಯ ಭೂಮಿ ಅಥವಾ ಕೃಷಿ ಭೂಮಿಗಳು) ಲ್ಲಿನ ಕಟ್ಟಡಗಳನ್ನು ಬಿಬಿಎಂಪಿ ಅಕ್ರಮ ಕಟ್ಟಡ ಎಂದು ಪರಿಗಣಿಸುತ್ತಿದೆ.