Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ
bangalore , ಮಂಗಳವಾರ, 24 ಜನವರಿ 2023 (20:08 IST)
ಗಾರ್ಡನ್ ಸಿಟಿಯನ್ನ ಮತ್ತಷ್ಟು ಸುಂದರವಾಗಿ ಇರಿಸಲು ಶ್ರಮಿಸುವ ಜೀವಿಗಳ ಕಷ್ಟಕ್ಕೆ ಯಾರು ಕ್ಯಾರೇ ಅನ್ನೋದಿಲ್ಲ. ಆದ್ರೆ ಅವರು ಒಂದೇ ಒಂದು ದಿನ ಸರ್ಕಾರ ಮತ್ತು ಅಧಿಕಾರಗಳಂತೆ ನಿರ್ಲಕ್ಷ್ಯ ತೋರಿದ್ರೆ ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗುವುದಂತು ಪಕ್ಕ. ಅಂತಾ ಕಾಯಕ ಕೈಯಿಗಳಿಗೆ ಸರ್ಕಾರ ಮತ್ತು ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ.  ಬೆಂಗಳೂರನ್ನ ಸ್ವಚ್ಚವಾಗಿಡಲು ಸಾಲಿಡ್ ವೆಸ್ಟ್ ಮ್ಯಾನೇಜ್ ಮೆಂಟ್ ಅಡಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಬಿಬಿಎಂಪಿ ಸಂತಸದ ಸುದ್ದಿಯನ್ನ ನೀಡಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನ ಖಾಯಂಗೊಳಿಸಲು ಸರ್ಕಾರ ಅನುಮತಿ ನೀಡಿದೆ. ಅನುಮತಿ ನೀಡಿದ ಬೆನ್ನಲ್ಲೆ ಬಿಬಿಎಂಪಿ 3676 ಜನ ಪೌರಕಾರ್ಮಿಕರನ್ನ ಖಾಯಂಗೊಳಿಸಲು ಅರ್ಜಿ ಆಹ್ವಾನ ಮಾಡಿದೆ.

ಇದೇ ತಿಂಗಳ ಅಂತ್ಯದ ಒಳಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿದ್ದು, ಸಿನಿಯಾರಿಟಿ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.  ಬಿಬಿಎಂಪಿಯಲ್ಲಿ ಸುಮಾರು 15 ಸಾವಿರ ಹೊರಗುತ್ತಿಗೆ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ರು, ಅವರಿಗೆ ಬಿಬಿಎಂಪಿಯೇ ಡೈರೆಕ್ಟ್ ಫೇಮೆಂಟ್ ಸಿಸ್ಟಂ ಅಡಿಯಲ್ಲಿ ವೇತನ ಪಾವತಿ ಮಾಡುತ್ತಿತ್ತು. 2018ಕ್ಕು ಮೊದಲು ಗುತ್ತಿಗೆ ಆಧಾರದ ಮೇಲೆ ಕಾಂಟ್ರಾಕ್ಟ್ರಗಳ ಅಡಿಯಲ್ಲಿ ಪೌರಕಾರ್ಮಿಕರು ಕೆಲಸ ಮಾಡ್ತಿದ್ರು. ಈ ವೇಳೆ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರಿಗೆ ಸರಿಯಾಗಿ ಪಿಎಫ್, ಇ ಎಸ್ ಯ ಹಾಗು ಇತರೆ ಸೌಲಭ್ಯಗಳು ಸರಿಯಾಗಿ ಲಭ್ಯವಿರಲ್ಲ. ಈ ಹಿನ್ನಲೆ ಪೌರಕಾರ್ಮಿಕರು ಹಲವು ವರ್ಷಗಳಿಂದ ಖಾಯಂಗೊಳಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ರು. ಇದೀಗ ಸರ್ಕಾರ ಸಿನಿಯಾರಿಟಿ ಆಧಾರದ ಮೇಲೆ, ಕನಿಷ್ಠ ಎರಡು ವರ್ಷ ಕೆಲಸ ಮಾಡಿರಬೇಕು, ಗರಿಷ್ಠ 55 ವರ್ಷ ಮಿತಿಯನ್ನ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು.  ತಮ್ಮ ನಿಸ್ವಾರ್ಥ ಸೇವೆಯಿಂದ ನಗರವನ್ನ ಸ್ವಚ್ಚವಿಡುವ ಕೈಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿರುವುದು ಪೌರಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಂತ ಹಂತವಾಗ ಅವಶ್ಯಕತೆಗೆ ತಕ್ಕಂತೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನ ಬಿಬಿಎಂಪಿ ಖಾಯಂಗೊಳಿಸಲಿದ್ಯಂತೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಾಚ್ ತುಂಬಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರು