ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇಂದು ಕೋಲಾಹಲ ಸೃಷ್ಟಿಸಿದೆ. ಮೂವರು ಕಾರ್ಪೋರೇಟರ್‌ಗಳು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ವರದಿಯಾಗಿದೆ.
ಲಗ್ಗೆರೆ ಕ್ಷೇತ್ರದ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ನಾರಾಯಣ ಸ್ವಾಮಿ ಇಂದು ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆದರೆ, ಮೇಯರ್ ಜಿ.ಪದ್ಮಾವತಿ ಶೂನ್ಯ ವೇಳೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಮಹಿಳಾ ಕಾರ್ಪೋರೇಟರ್‌ಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಮಂಜುಳಾ ನಾರಾಯಣ ಸ್ವಾಮಿ ಮತ್ತೊಬ್ಬ ಮಹಿಳಾ ಕಾರ್ಪೋರೇಟರ್ ಫಿನಾಯಿಲ್ ಸೇವಿಸಲು ಯತ್ನಿಸಿದಾಗ ಅವರನ್ನು ಇತರ ಸದಸ್ಯರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿಯಾಗಲಿ, ಸಿಎಂ ಸಿದ್ದರಾಮಯ್ಯರಾಗಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ರಸ್ತೆಯ ಮೇಲೆ ಇತರ ಪಕ್ಷಗಳ ಕಾರ್ಪೋರೇಟರ್‌ಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಮಂಜುಳಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.