ವೀಕೆಂಡ್ ಕರ್ಫ್ಯೂ ಸಭೆ ಮುನ್ನ ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಸಭೆ ನಡೆಸಿದ್ದಾರೆ.
ವಾರಂತ್ಯದ ಕರ್ಫ್ಯೂ ಬಗ್ಗೆ ಇಂದು ರಾಜ್ಯ ಸರ್ಕಾರವು ಸಭೆ ನಡೆಸುತ್ತಿದ್ದು, ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಮಂಜುನಾಥ್ ಸಭೆ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಬಿಬಿಎಂಪಿ ಕಮಿಷನರ್ ಹಾಗೂ ಪೊಲೀಸ್ ಕಮೀಷನರ್
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೌರವ್ ಗುಪ್ತ, ಸಿಎಂ ಜೊತೆಯಲ್ಲಿ ಸಭೆಯಿದೆ. ಈ ಹಿನ್ನೆಲೆಯಲ್ಲಿ ಪೂರ್ವಾಭಾವಿಯಾಗಿ ಸಭೆಯನ್ನು ಮಾಡಿದ್ವಿ. ಯಾವ್ಯಾವ ಕ್ರಮಕೈಗೊಳ್ಳುವುದರ ಬಗ್ಗೆ ತೀರ್ಮಾನ ಮಾಡಬೇಕಿದೆ. ನಮ್ಮ ಸಲಹೆಯನ್ನು ಮುಖ್ಯಮಂತ್ರಿ ಅವರ ಮುಂದೆ ಇಡ್ತೀವಿ. ವೀಕೆಂಡ್ ಕರ್ಫ್ಯೂ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಆಧರಿಸಿ ನಮ್ಮ ಸಲಹೆಗಳನ್ನು ಸಭೆಯಲ್ಲಿ ತಿಳಿಸುವುದಾಗಿ ಹೇಳಿದರು.
ಕಮಲ್ ಪಂತ್ ಮಾತನಾಡಿ, ನಮ್ಮ ಸಲಹೆಗಳು ಏನು ಇಲ್ಲ. ತಜ್ಞರು ಏನು ಮಾತನಾಡ್ತಾರೆ ನೋಡಿಕೊಂಡು ನಾವು ಅಭಿಪ್ರಾಯ ಹೇಳ್ತೀವಿ. ಸರ್ಕಾರ ಯಾವ ಕ್ರಮಕೈಗೊಳ್ಳಲಿ ಅಂತಾರೆ ಅದನ್ನ ತೆಗೆದುಕೊಳ್ಳುತ್ತೇವೆ. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಮಾಡ್ತೀವಿ. ನಮ್ಮ ಮಾಹಿತಿಯನ್ನು ಮುಂದೆ ಇಡ್ತೀವಿ, ವೀಕೆಂಡ್ ಕರ್ಫ್ಯೂ ಬಗ್ಗೆ ತಜ್ಞರು ವರದಿ ಕೊಡ್ತಾರೆ.
ನೈಟ್ ಕರ್ಫ್ಯೂ ಬಗ್ಗೆಯೂ ಮಾತನಾಡ್ತಾ ಇದ್ದೀವಿ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.