ಬೆಂಗಳೂರು: ಗಾಬರಿಯಾಗಬೇಡಿ. ಬೆಂಗಳೂರಲ್ಲಿ ಈವತ್ತು ವಿರಳ ಸಂಚಾರ ದಿನ ಆಚರಿಸಲಾಗುತ್ತಿದೆ. ಹಾಗಂತ ಓಡಾಟಕ್ಕೆ ವಾಹನ ಇರಲ್ಲಅಂತಲ್ಲ.
ಇದು ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸರ್ಕಾರ ಹೂಡಿರುವ ಹೊಸ ಯೋಜನೆ. ಅದರಂತೆ ಈವತ್ತು ಸಾರ್ವಜನಿಕರು ತಮ್ಮ ಖಾಸಗಿ ವಾಹನ ಬಿಟ್ಟು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸಲು ಪ್ರೇರೇಪಿಸುವ ಸಲುವಾಗಿ ವಿರಳ ಸಂಚಾರ ದಿನ ಆಚರಿಸಲಾಗುತ್ತಿದೆ.
ಇಂದು ಕಡಿಮೆ ದರದಲ್ಲಿ ಸಾರ್ವಜನಿಕರು ನಗರದಲ್ಲಿ ಪ್ರಯಾಣ ಮಾಡಬಹುದು. ಬಿಎಂಟಿಸಿ ದೈನಂದಿನ ಪಾಸ್ ದರ ಎಂದಿಗಿಂತ 5 ರೂ. ಕಡಿಮೆ ಇರಲಿದೆ. ಬಸ್ ಬೇಡಿಕೆ ಹೆಚ್ಚು ಇರುವ ಸ್ಥಳಗಳಿಗೆ ಇಂದು ಹೆಚ್ಚುವರಿಯಾಗಿ ಬಸ್ ಸಂಚರಿಸಲಿದೆ. ಬೆಂಗಳೂರು ಮೆಟ್ರೋ ಕೂಡಾ ಈ ಅಭಿಯಾನದಲ್ಲಿ ಕೈ ಜೋಡಿಸಲಿದೆ. ಇದು ಯಶಸ್ವಿಯಾದರೆ ಇನ್ನು ಮುಂದೆ ತಿಂಗಳಲ್ಲಿ ಒಂದು ದಿನವಾದರೂ ವಿರಳ ಸಂಚಾರ ದಿನ ಆಚರಿಸಲು ಸರ್ಕಾರ ಚಿಂತನೆ ನಡೆಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ